ಕುಂದಗೋಳ : ಇದು ಪವಾಡವೋ, ಅದ್ಭುತವೋ, ಆಶ್ಚರ್ಯವೋ ಗೊತ್ತಿಲ್ಲ. ಆದ್ರೇ ಹನುಮ ಜಯಂತಿ ದಿನವೇ ಇಲ್ಲೊಂದು ಗ್ರಾಮದ ಆಂಜನೇಯನ ಕಣ್ಣಲ್ಲಿ ಆನಂದಭಾಷ್ಪ ಕಂಡಿದೆ.
ಕುಂದಗೋಳ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಆಂಜನೇಯನಿಗೆ ಪೂಜಾಭಿಷೇಕ ನೆರವೇರಿದ ಬಳಿಕ ಆನಂದ ಭಾಷ್ಪ ಆಂಜನೇಯನ ಕಣ್ಣಲ್ಲಿ ಕಂಡಿದ್ದು ಭಕ್ತರು ಆಶ್ಚರ್ಯ ಚಕಿತರಾಗಿದ್ದಾರೆ.
ಹನುಮ ಜಯಂತಿ ಅಂಗವಾಗಿ ದೇವಸ್ಥಾನ ಆಂಜನೇಯನಿಗೆ ವಿಶೇಷ ಪೂಜಾಭಿಷೇಕ ನೆರವೇರಿಸಿದ ಬಳಿಕ ಈಗಲೂ ಸಹ ಹನಿ ಹನಿಯಾಗಿ ಆನಂದಭಾಷ್ಪ ಸುರಿಯುತ್ತಿದೆ.
ಒಟ್ಟಾರೆ ಭಕ್ತರಲ್ಲಿ ಹನುಮಂತನ ಕಣ್ಣಲ್ಲಿ ಸುರಿಯುತ್ತಿರುವ ಆನಂದಭಾಷ್ಪ ಕಂಡು ಭಕ್ತರಲ್ಲಿ ಚರ್ಚೆಗಳು ಆರಂಭವಾಗಿವೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/04/2022 04:52 pm