ಲಕ್ಷ್ಮೇಶ್ವರ: ರೈತನ ಜಮೀನಿನಲ್ಲಿ ಏಕಾಏಕಿ ದೇವರು ಮೂರ್ತಿಗಳು ಉದ್ಭವವಾಗಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪುರ ಸರಹದ್ದಿಗೆ ಹೊಂದಿಕೊಂಡಿರುವ ಸವಣೂರು ತಾಲೂಕಿ ಇಚ್ಚಂಗಿ ಗ್ರಾಮದ ರೈತನ ಜಮೀನಿನಲ್ಲಿ ನಡೆದಿದೆ.
ಹೌದು.. ಉಡಚಪ್ಪ, ಮಂಜವ್ವ ಅವರಿಗೆ ಸಂಬಂಧಿಸಿದ ಜಮೀನಿನಲ್ಲಿ ಘಟನೆ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ದೌಡಾಯಿಸುತ್ತಿದ್ದಾರೆ. ಅಲ್ಲದೇ ಒಂದು ವಾರದಿಂದ ಮನೆ ಬಿಟ್ಟು ಜಮೀನಿನಲ್ಲಿ ದಂಪತಿಗಳು ಬೀಡುಬಿಟ್ಟಿದ್ದಾರೆ.
ನನ್ನ ಕನಸಿನಲ್ಲಿ ಬಂದು ಭಿಕ್ಷೆ ಬೇಡಬೇಕು ನೀವು ನಿಮ್ಮ ಹೊಲದಲ್ಲಿ ನಾನಿದ್ದೇನೆ ಎಂದು ದೈವಶಕ್ತಿ ಹೇಳುತ್ತಾಳೆ ಎನ್ನುತ್ತಿದ್ದಾಳೆ ಮಂಜವ್ವ. ಇನ್ನೂ ಈ ಮಾತು ಕೇಳಿ ಉಡಚಪ್ಪ ಪತ್ನಿ ಮಂಜವ್ವ ಹಾಗೂ ಇಬ್ಬರು ಮಕ್ಕಳು ಭಿಕ್ಷೆ ಬೇಡಲು ಹೊರಟಿದ್ದಾರೆ. ಸುದ್ದಿ ಕೇಳಿ ಭಕ್ತರು ಹೂ , ಹಣ್ಣು, ಕಾಯಿ ತಂದು ಪೂಜೆ ಮಾಡುತ್ತಿದ್ದಾರೆ. ಒಂದಡೆ ಈ ಗ್ರಾಮದ ಕೆಲವರಿಂದ ಅನುಮಾನದ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದಡೆ ದೇವರ ಬಗ್ಗೆ ಧಾರ್ಮಿಕ ಭಾವನೆ ಹೊಂದಿರುವ ಮುಗ್ಧ ಜನತೆ ತಮ್ಮ ಭಕ್ತಿಯ ಪರಾಕಾಷ್ಠೆ ತೊರಿಸುತ್ತಿದ್ದಾರೆ.
ಒಟ್ಟಿನಲ್ಲಿ ಇದು ಜನ ಮರಳೋ, ಜಾತ್ರೆ ಮರಳೋ ಎಂಬುವಂತಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸತ್ಯಾಸತ್ಯತೆ ಪರಾಮರ್ಶಿಸಬೇಕಾಗಿದೆ.
Kshetra Samachara
14/09/2021 04:53 pm