ಕಲಘಟಗಿ: ಇದು ಬಿರುಬೇಸಿಗೆಯ ಕಾಲ. ನೆತ್ತಿ ಸುಡುವ ಬಿಸಿಲು. ಈ ಬೇಸಿಗೆ ಕಾಲವು ಸಾರ್ವಜನಿಕರನ್ನು ಇನ್ನಷ್ಟು ಕಂಗಾಲಾಗಿಸಿಬಿಟ್ಟಿದೆ. ಇದರಿಂದ ಬೇಸತ್ತ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಕಲಘಟಗಿ ತಾಲೂಕಿನಲ್ಲಿ ಬಿರು ಬೇಸಿಗೆಯಿಂದ ಕಂಗೆಟ್ಟು ಹೋದ ಸಾರ್ವಜನಿಕರು ಮನೆಯಲ್ಲಿರಲಾಗದೇ ಮನೆಯಿಂದ ಹೊರಗಡೆ ಬಂದು ಗಿಡ ಮರ, ಸಾರ್ವಜನಿಕ ಸ್ಥಳಗಳು, ಹೊಲ ಗದ್ದೆ ಸೇರಿದಂತೆ ದೇವಾಸ್ಥಾನದ ಅವರಣಗಳತ್ತ ಮುಖ ಮಾಡುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿನ ಪ್ರಯಾಣಿಕರು, ಬೀದಿ ಬದಿ ವ್ಯಾಪಾರಸ್ಥರು, ಬಸ್ ನಿಲ್ದಾಣದಿಂದ ಸಂಚರಿಸುವ ಪ್ರಯಾಣಿಕರು, ಬೇಸಿಗೆಯ ಝಳಕ್ಕೆ ಬೆಂದು ಬಸ್‌ನಲ್ಲಿ ಸಂಚರಿಸುವಾಗ ಕಿಟಕಿಗಳ ಮೊರೆ ಹೋಗುತ್ತಿದ್ದಾರೆ. ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳಲ್ಲಿ ವಹಿವಾಟು ಮಾಡಲು ತಡವರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಂಚರಿಸುವ ಸಾರ್ವಜನಿಕರಂತೂ ಹತ್ತಿರದ ಕಬ್ಬಿನ ಹಾಲು, ಎಳನೀರು, ಐಸ್ ಪಾರ್ಲರ್, ಮಜ್ಜಿಗೆ ಸೇರಿದಂತೆ ಇನ್ನಿತರೆ ತಂಪು ಪಾನೀಯಗಳ ಅಂಗಡಿಗಳಿಗಳತ್ತ ಮುಖ ಮಾಡುತ್ತಿದ್ದಾರೆ.
ಈ ಬೇಸಿಗೆಯಿಂದ ಜನರು ಮನೆಯಲ್ಲಿ ನೆಮ್ಮದಿಯಿಂದ ಇರಲಾಗದೆ ಮನೆ ಹೊರಗಡೆಯೇ ಕಾಲ ಕಳೆಯುವಂತಾಗಿದೆ. ಏನೇ ಆಗ್ಲಿ ಬಿಸಿಲಿನ ಧಗೆಯಿಂದ ಜನ ಬೆಂದು ಬೇಸತ್ತು ಕಂಗಾಲಾಗಿದ್ದಾರೆ. ಬೀದಿ ಬದಿ ತಂಪು ಪಾನೀಯ ವ್ಯಾಪಾರಸ್ಥರಿಗೆ ಉತ್ತಮ ವ್ಯಾಪಾರವೂ ಆಗುತ್ತಿದೆ.
ವರದಿ :ವಿರೇಶ ಹಾರೊಗೇರಿ, ಕಲಘಟಗಿ
Kshetra Samachara
25/04/2022 10:35 pm