ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಕ್ಕೂರುಳಿದ ವಿದ್ಯುತ್ ಕಂಬಗಳು, ಸ್ಥಳಕ್ಕೆ ಕೆಇಬಿ ಸಿಬ್ಬಂದಿಗಳ ಭೇಟಿ

ನವಲಗುಂದ : ನವಲಗುಂದ ಪಟ್ಟಣದಲ್ಲಿ ಬುಧವಾರ ಸಂಜೆಯಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜೋಶಿ ಪ್ಲಾಟ್ ನಲ್ಲಿನ ಮೂರು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಘಟನೆಯಿಂದ ಯಾವುದೇ ಹಾನಿಗಿಲ್ಲ ಎಂದು ತಿಳಿದುಬಂದಿದೆ.

ಹೌದು ಇಂದು ಸಂಜೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಈಗಾಗಲೇ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಲವು ಅವಘಡಗಳು ಸಂಭಾವಿಸಿದ್ದು, ಪಟ್ಟಣದ ಜೋಶಿ ಪ್ಲಾಟ್ ನಲ್ಲಿ ಮೂರು ಕಂಬಗಳು ಬಿದ್ದಿವೆ. ಮತ್ತು ಇನ್ನು ನಾಲ್ಕು ಕಂಬಗಳು ಬೀಳುವ ಆತಂಕದಲ್ಲಿವೆ. ಸ್ಥಳಕ್ಕೆ ನವಲಗುಂದ ಕೆಇಬಿ ಸಿಬ್ಬಂದಿಗಳು ಭೇಟಿ ನೀಡಿ, ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದರು.

Edited By : PublicNext Desk
Kshetra Samachara

Kshetra Samachara

17/11/2021 09:40 pm

Cinque Terre

9.09 K

Cinque Terre

0

ಸಂಬಂಧಿತ ಸುದ್ದಿ