ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಹಳೆಯ ವಿದ್ಯಾರ್ಥಿಗಳಿಂದ ಸಸಿ ಸಂರಕ್ಷಣೆ

ನವಲಗುಂದ : ಒಮ್ಮೆ ಶಾಲೆಯಲ್ಲಿ ಕಲಿತ ನಂತರ ವಿದ್ಯಾರ್ಥಿಗಳು ತಮ್ಮ ಶಾಲೆಯ ಏಳಿಗೆಗಾಗಿ ಕೂಡ ಕೈಜೋಡಿಸುವಂತಹ ಸಾಕಷ್ಟು ನಿದರ್ಶನಗಳಿವೆ, ಅದೇ ಸಾಲಿಗೆ ಪಟ್ಟಣದ ಮಾಡೆಲ್ ಪ್ರೌಢ ಶಾಲೆಯಲ್ಲಿ 97 ನೇ ಸಾಲಿನಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳು ಸೇರ್ಪಡೆಯಗಿದ್ದಾರೆ ಎನ್ನಬಹುದು.

ಹೌದು ಕಳೆದ ಆಗಸ್ಟ್ 15 ರಂದು ಗುರುವಂದನಾ ಕಾರ್ಯಕ್ರಮದಲ್ಲಿ ಶಾಲೆಯ ಆವರಣದಲ್ಲಿ ನೆಟ್ಟ ಗಿಡಗಳ ಬಗ್ಗೆ ಅಪಾರ ಕಾಳಜಿ ವಹಿಸಿ ಅದರ ಪೋಷಣೆಯಲ್ಲಿ ಹಳೆ ವಿದ್ಯಾರ್ಥಿಗಳು ತೊಡಗಿದ್ದಾರೆ. ಗಿಡಗಳಿಗೆ ಸಮರ್ಪಕವಾಗಿ ಪ್ರತಿ ವಾರ ಟ್ಯಾಂಕರ್ ಮೂಲಕ ನೀರು ಜೊತೆಗೆ ಗೊಬ್ಬರವನ್ನು ಸಹ ನಿಡುತ್ತಾ ಗಿಡಗಳ ರಕ್ಷಣೆಗಾಗಿ ಮುಳ್ಳಿನ ಬೇಲಿಯನ್ನು ನಿರ್ಮಿಸಿ ಗಿಡಗಳ ಆರೈಕೆ ಮಾಡುತ್ತಿದ್ದಾರೆ. ಹಸನ ನದಾಫ, ಬಸು ಹೊಸಮನಿ, ಬಸು ಕೆರಿಮಠ, ರಾಜು ಮಕಾಂದಾರ, ಮಂಜು ಕುಂಕುಮಗಾರ, ಗಿರೀಶ್ ಜಾಧವ್, ಜಗದೀಶ್ ಧುತಾರಿ, ದಾವಲ ನದಾಫ, ಮಲೀಕ ನದಾಫ, ಜಗದೀಶ್ ಕಳಕಾಪೂರ, ಜಮೀರ ಕಲಬುರ್ಗಿ ಸೇರಿದಂತೆ ಇನ್ನು ಹಲವು ಹಳೆಯ ವಿದ್ಯಾರ್ಥಿಗಳಿಂದ ಈ ಕೆಲಸವಾಗುತ್ತಿದ್ದು, ಇದು ಜನರ ಮೆಚ್ಚುಗೆಗೆ ಸಹ ಪಾತ್ರವಾಗಿದೆ.

Edited By : PublicNext Desk
Kshetra Samachara

Kshetra Samachara

04/10/2021 07:42 pm

Cinque Terre

21.84 K

Cinque Terre

0

ಸಂಬಂಧಿತ ಸುದ್ದಿ