ತಾಯಿಯ ಹಾಲು ಅಮೃತ ಸಮಾನ. ಈ ಮಾತು ಕೇವಲ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿಗಳ ವಿಚಾರದಲ್ಲಿಯೂ ಅನ್ವಯವಾಗುತ್ತದೆ. ಹುಟ್ಟಿದ ಪ್ರತಿ ಜೀವಿಯೂ ಬದುಕಲು ತಾಯಿಯ ಆರೈಕೆ ತುಂಬಾನೇ ಅವಶ್ಯಕ. ಕುಂದಗೋಳದ ಪಶುಪತಿಹಾಳ ಗ್ರಾಮದಲ್ಲಿ ಗೋವಿನ ತಾಯಿ ಪ್ರೀತಿಯೊಂದು ಭಾರೀ ಪ್ರಶಂಸೆಗೆ ಪಾತ್ರವಾಗುತ್ತಿದೆ. ಹಸಿವಿನಿಂದ ಬಳಲುತ್ತಿರುವ ಮೇಕೆ ಮರಿಗಳಿಗೆ ಹಸು ಹಾಲುಣಿಸುತ್ತಿದ್ದು ಇದು ನೋಡುಗರಿಗೂ ಅಚ್ಚರಿ ಎನಿಸಿದೆ.
ಪಶುಪತಿಹಾಳ ಗ್ರಾಮದ ದೇವಪ್ಪ ನಾಯ್ಕರ್ ಎಂಬುವವರ ಮನೆಯಲ್ಲಿನ ಜೆರ್ಸಿ ಆಕಳದೊಂದು ಮೇಕೆಯ ಮರಿಗಳಿಗೆ ಹಾಲುಣಿಸಿ ವಿಶೇಷ ಎನಿಸಿದ್ದು ನೋಡುಗರಿಗೆ ಅಪರೂಪ ಎನಿಸುತ್ತಿದೆ.
ಸ್ವಾಭಾವಿಕವಾಗಿ ಬೇರೆ ಮರಿಗಳಿಗೆ ಪ್ರಾಣಿಗಳು ಹಾಲುಣಿಸುವುದು ಅತಿ ವಿರಳ, ಆದ್ರೇ, ಈ ಆಕಳು ಮಾತ್ರ ನಿತ್ಯ ಹಿಂಡಿನ ಜೊತೆ ಮೇಯಲು ಹೋದ ಮೇಕೆಯ ಒಂದಲ್ಲಾ ಎರಡಲ್ಲಾ ನಾಲ್ಕು ಮರಿಗಳಿಗೆ ಹಾಲುಣಿಸುತ್ತಿದ್ದು, ಗೋಮಾತೆ ಮಾತೃ ಹೃದಯಿ ಎಂಬುದಕ್ಕೆ ಸಾಕ್ಷಿಯಾಗಿದೆ. ಅದರಂತೆ ಮೇಕೆ ಸಹ ಆಕಳ ಹಾಲನ್ನು ಸ್ವೀಕರಿಸುತ್ತಿರುವುದು ವಿಸ್ಮಯವೇ ಸರಿ.
Kshetra Samachara
04/06/2022 04:47 pm