ಎಲ್ಲೆಡೆ ಮುಂಗಾರು ಮಳೆ ಸಂಪಾಗಿ ಸುರಿದಿದ್ದರಿಂದ ರೈತರೆಲ್ಲರ ಮೊಗದಲ್ಲಿ ಮಂದಹಾಸ ಮೂಡಿತ್ತು.ಬಿತ್ತನೆ ಕಾರ್ಯ ಭರದಿಂದ ಮುಗಿಸಿ ಸುಖದಿ ಬೆಳೆದ ಬೆಳೆಗಳ ಬಗ್ಗೆ ಸಂತಸ ಪಡಬೇಕು ಎನ್ನುವಷ್ಟರಲ್ಲಿ ಕಬ್ಬಿಗೆ ಬಿದ್ದ ತುಕ್ಕು ರೋಗಕ್ಕೆ ರೈತಾಪಿವರ್ಗ ಕಂಗಾಲಾಗಿ ಹೋಗಿದೆ.
ಅಳ್ನಾವರ ತಾಲೂಕು ಅರೆ ಮಲ್ನಾಡು ಪ್ರದೇಶ.ಇಲ್ಲಿ ಹೆಚ್ಚಾಗಿ ಕಬ್ಬು ಬೆಳೆಯೇ ರೈತರ ಜೀವಾಳ.ಈ ಬಾರಿ ಸಮಯಕ್ಕೆ ತಕ್ಕಂತೆ ಮುಂಗಾರು ಮಳೆ ಸುರಿದಿದ್ದರಿಂದ ಕಬ್ಬು ಅತ್ಯಂತ ಸೊಗಸಾಗಿ ಬೆಳೆದಿದೆ.ಆದರೆ ಇತ್ತೀಚಿಗೆ ಸುಮಾರು ಹದಿನೈದು ದಿನಗಳಿಂದೀಚೆಗೆ ಕಬ್ಬಿಗೆ ತುಕ್ಕು ರೋಗ ಕಾಣಿಸಿಕೊಂಡಿದೆ. ಇದರಿಂದ ಬೆಳೆದ ಕಬ್ಬೆಲ್ಲಾ ರೋಗಕ್ಕೆ ತುತ್ತಾಗಿ ಕೆಂಡದಂತೆ ಗೋಚರಿಸತೊಡಗಿದೆ.
ಬೈಟ್:ಸುನಂದಾ ಸಿತೋ (ಕೃಷಿ ಅಧಿಕಾರಿ)
ಈ ಕಬ್ಬಿನ ರೋಗದಿಂದ ಕಬ್ಬಿಣ ಬೆಳವಣಿಗೆಯಲ್ಲಿ ಕುಂಠಿತಗೊಳ್ಳುತ್ತೇ.ಇಳುವರಿ ಅಧಿಕ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.ಇದರಿಂದ ನೇರವಾಗಿ ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗುತ್ತದೆ.ಹೀಗಾಗಿಯೇ ಕಬ್ಬು ಬೆಳೆದ ರೈತರು ನಿಜಕ್ಕೂ ಕಂಗಾಲಾಗಿ ಹೋಗಿದ್ದಾರೆ.
Kshetra Samachara
24/05/2022 04:01 pm