ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ತಾಲೂಕಿನಾದ್ಯಂತ ವರುಣನ ಅಬ್ಬರ- ಕುಸಿದು ಬಿದ್ದ ಮನೆಗಳ ಛಾವಣಿ, ಗೋಡೆಗಳು

ತಾಲೂಕಿನಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಬುಧುವಾರ ರಾತ್ರಿ 11:00ರ ಸುಮಾರಿಗೆ ಪ್ರಾರಂಭವಾದ ಮಳೆ ಇವರೆಗೂ ನಿಲ್ಲುತ್ತಿಲ್ಲ. ರಸ್ತೆಗಳೆಲ್ಲ ಹಳ್ಳ ಕೆರೆಗಳಂತೆ ಕಾಣುತ್ತಿದ್ದು, ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ.

ಇನ್ನೂ ಅಣ್ಣಿಗೇರಿ ತಾಲೂಕಿನಾದ್ಯಂತ 98.6 ಮಿಲಿ ಮೀಟರ್ ಮಳೆಯಾಗಿದ್ದು, ತಾಲೂಕಿನ ಗ್ರಾಮಗಳಾದ ಬಲ್ಲರವಾಡ, ಮನಕವಾಡ ಗ್ರಾಮಗಳಲ್ಲಿ ಸಾರ್ವಜನಿಕರ ಮನೆಯ ಛಾವಣಿ ಹಾಗೂ ಗೋಡೆಗಳು ಬಿದ್ದಿರುತ್ತದೆ ಎಂದು ತಿಳಿದು ಬಂದಿರುತ್ತದೆ. ಹವಾಮಾನ ಇಲಾಖೆ ಇನ್ನೂ ಎರಡು ಮೂರು ದಿನಗಳ ಕಾಲ ಮಳೆ ಮುಂದುವರಿಯುತ್ತದೆ ಎಂದು ಸೂಚನೆ ನೀಡಿದೆ.

ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಅತಿ ಮಳೆ ಆಗುತ್ತಿರುವುದರಿಂದ ಜಿಲ್ಲಾಧಿಕಾರಿ ಹೆಗಡೆ ಅವರು ಈಗಾಗಲೇ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಇನ್ನೂ ರೈತರಿಗೆ ಅತಿ ಮಳೆಯಿಂದಾಗಿ ಜಮೀನಿನಲ್ಲಿ ಆಗಬೇಕಾಗಿರುವ ಕೆಲಸಗಳು ನಿಂತುಕೊಂಡಿರುತ್ತವೆ. ಇನ್ನೂ ಸ್ವಲ್ಪ ದಿನಗಳು ಹೋದರೆ ಮುಂಗಾರು ಬಿತ್ತನೆ ಪ್ರಾರಂಭವಾಗುತ್ತದೆ ಆದರೆ ಮಳೆರಾಯನ ಆರ್ಭಟದಿಂದ ಜಮೀನಲ್ಲಿ ಹದ ಮಾಡಲು ಆಗುತ್ತಿಲ್ಲ ಎಂದು ರೈತನಿಗೆ ಚಿಂತೆಯಾಗಿದೆ.

Edited By :
Kshetra Samachara

Kshetra Samachara

20/05/2022 04:25 pm

Cinque Terre

29.56 K

Cinque Terre

1

ಸಂಬಂಧಿತ ಸುದ್ದಿ