ಅಳ್ನಾವರ ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಮಡವಾಳಿ ಬೂದಿಕೊಪ್ಪ ಎಂಬುವವರ ಅಡುಗೆ ಮನೆಯಲ್ಲಿ ಪ್ರತ್ಯಕ್ಷವಾಗಿದ್ದ ಹಾವನ್ನು ಸ್ನೇಕ್ ಕ್ಯಾಚರ್ ನವೀನ್ ಕುಬೊಜಿ ಹಿಡಿದು ಕಾಡಿಗೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.
ಹಾಡಹಗಲೇ ಮನೆಯ ಒಳಗೋಡೆ ಮೇಲೆ ಇದ್ದ ಬೃಹತ್ ಗಾತ್ರದ ಹಾವನ್ನು ಮನೆಯವರು ನೋಡಿ ಗಾಬರಿಗೊಂಡಿದ್ದಾರೆ. ನಂತರ ಸ್ನೇಕ್ ಮಾಸ್ಟರ್ ಎಂದೇ ಕರೆಸಿಕೊಳ್ಳುವ ಅಂಬೋಳ್ಳಿ ಗ್ರಾಮದ ನವೀನ್ ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ನವೀನ್, ಅಡುಗೆ ಮನೆಯಲ್ಲಿದ್ದ ಹಾವನ್ನು ಸುಲಭವಾಗಿ ಹಿಡಿದು, ಕಾಡಿಗೆ ಬಿಟ್ಟು ಬಂದರು.
ತಾಲೂಕಿನೆಲ್ಲೆಡೆ ಹಾವು ಹಿಡಿಯುವಲ್ಲಿ ಫೇಮಸ್ ಆಗಿರುವ ನವೀನ್, ಯಾರ ಬಳಿಯೂ ಹಣ ತೆಗೆದುಕೊಳ್ಳದೆ ನಾಗರ ಹಾವು ಸಹಿತ ಯಾವುದೇ ಹಾವು ಹಿಡಿದು ಮನೆಯವರ, ಸ್ಥಳೀಯರ ಭಯಭೀತಿ ದೂರ ಮಾಡುತ್ತಾರೆ.
ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್ ಅಳ್ನಾವರ
Kshetra Samachara
07/04/2022 12:54 pm