ಕುಂದಗೋಳ: ಎಪಿಎಂಸಿ ಆವರಣದಲ್ಲಿ ಮೇಯಲು ಬಂದು ತಗ್ಗಿಗೆ ಬಿದ್ದು ಮೇಲೆ ಬರಲಾರದೆ ನರಳಾಡುತ್ತಿದ್ದ ಎಮ್ಮೆಯನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
ಹೌದು ! ಕುಂದಗೋಳ ಪಟ್ಟಣದ ಈಶ್ವರಪ್ಪ ಎಂಬುವವರ ಎಮ್ಮೆ ಮೇಯುತ್ತಾ ಸಾಗಿ ಇಂದು ಮಧ್ಯಾಹ್ನ ತಗ್ಗಿಗೆ ಬಿದ್ದಿದೆ. ತಕ್ಷಣವೇ ಗಮನಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಕಾರ್ಯೋನ್ಮುಖವಾಗಿ ಎಮ್ಮೆಯನ್ನು ರಕ್ಷಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಠಾಣಾಧಿಕಾರಿ ಗೋವಿಂದಪ್ಪ ಟಿ, ಸಿಬ್ಬಂದಿಗಳಾದ ಮೋಹನ್ ಭುಜಂಗನವರ, ಸಂಗಪ್ಪ ಹಳ್ಳಿಯಾಳ, ರವಿ ಹವಾಲ್ದಾರ್, ಬಸವಣ್ಣೆಪ್ಪ ಇಚ್ಚಂಗಿ, ಎಮ್.ಕೆ ಬುಕ್ಕಟೆಗೇರ್ ಪಾಲ್ಗೊಂಡಿದ್ದರು.
Kshetra Samachara
05/07/2022 10:38 pm