ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗಾಯಗೊಂಡ ಪುನುಗು ಬೆಕ್ಕಿಗೆ ಚಿಕಿತ್ಸೆ

ಧಾರವಾಡ: ರಕ್ಷಣಾ ಕಾರ್ಯದ ವೇಳೆ ಗಾಯಗೊಂಡಿದ್ದ ಪುನುಗು ಬೆಕ್ಕಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಹೊಲವೊಂದರಲ್ಲಿ ಈ ಪುನುಗು ಬೆಕ್ಕು ಕಾಣಿಸಿಕೊಂಡಿತ್ತು. ಈ ವೇಳೆ ಅದೇ ಗ್ರಾಮದ ರಾಜನಗೌಡ ಪಾಟೀಲ ಎಂಬುವವರು ಆ ಬೆಕ್ಕನ್ನು ರಕ್ಷಣೆ ಮಾಡಿದ್ದರು.

ರಕ್ಷಣಾ ಕಾರ್ಯದ ವೇಳೆ ಬೆಕ್ಕಿಗೆ ಪೆಟ್ಟಾಗಿತ್ತು. ಕೂಡಲೇ ರೈತರು ಆ ಬೆಕ್ಕನ್ನು ಕೃಷಿ ವಿಶ್ವವಿದ್ಯಾಲಯದ ವೈದ್ಯ ಡಾ.ಅನೀಲ ಪಾಟೀಲ ಅವರ ಬಳಿ ಅದನ್ನು ತಂದು ಚಿಕಿತ್ಸೆ ಕೊಡಿಸಿದ್ದಾರೆ.

ಚಿಕಿತ್ಸೆ ನಂತರ ಆ ಬೆಕ್ಕನ್ನು ವೈದ್ಯರು, ಪ್ರಾಣಿಪ್ರಿಯ ಸೋಮಶೇಖರ ಅವರಿಗೆ ಅದನ್ನು ಹಸ್ತಾಂತರಿಸಿ ಅದರ ಆರೈಕೆ ಮಾಡುವಂತೆ ಹೇಳಿದ್ದು, ಸೋಮಶೇಖರ ಅವರು ಆ ಪುನುಗು ಬೆಕ್ಕಿನ ಆರೈಕೆ ಮಾಡುತ್ತಿದ್ದಾರೆ.

Edited By :
Kshetra Samachara

Kshetra Samachara

23/06/2022 07:26 pm

Cinque Terre

10.02 K

Cinque Terre

0

ಸಂಬಂಧಿತ ಸುದ್ದಿ