ಕುಂದಗೋಳ: ಏನಾದ್ರೂ ಸಾಧಿಸಬೇಕೆಂಬ ಛಲ, ಸಾಮಾಜಿಕ ಕಾರ್ಯ ಮಾಡಬೇಕಂಬ ಉತ್ಸಾಹ, ಸರೀಸೃಪಗಳ ರಕ್ಷಣೆ ಮಾಡಬೇಕೆಂಬ ಧೈರ್ಯವು ಇಲ್ಲೊಬ್ಬ ಯುವಕನನ್ನು ಸಮಾಜದ ಮುನ್ನೆಲೆಗೆ ತಂದು ನಾಲ್ಕು ಜನ ಗುರುತಿಸುವಂತೆ ಮಾಡಿದೆ.
ಈ ಯುವಕನ ಹೆಸರು ಸಿದ್ಧಾರೂಢ ಮಾವಿನಕಾಯಿ. ಕುಂದಗೋಳ ತಾಲೂಕಿನ ಚಾಕಲಬ್ಬಿ ಎಂಬ ಹಳ್ಳಿಯವ. ಈತನ ಸಾಧನೆ ನಿಜಕ್ಕೂ ಗ್ರೇಟ್ ಎನ್ನುವಂಥದ್ದು. ಹಾವುಗಳನ್ನು ಕಂಡರೆ ಮಾರುದ್ದ ಓಡಿ ಹೋಗುವವರ ನಡುವೆ ಈತ ಯಾವುದೇ ತರಬೇತಿ ಪಡೆಯದೇ ಲೀಲಾಜಾಲವಾಗಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬರುತ್ತಾನೆ.
ಇಲ್ಲಿಯವರೆಗೆ ಉಚಿತವಾಗಿ ಸರಿ ಸುಮಾರು 200ರಿಂದ 300ಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ರಕ್ಷಿಸಿರುವ ಈತ ವೃತ್ತಿಯಲ್ಲಿ ವಾಹನ ಚಾಲಕ.
ಐಟಿಐ ಶಿಕ್ಷಣ ಮುಗಿಸಿ ಬಳಿಕ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿ ಸದ್ಯ ಶಿಕ್ಷಣ ಮೊಟಕುಗೊಳಿಸಿ ವಾಹನ ಚಾಲಕನಾಗಿರುವ ಸಿದ್ಧಾರೂಢ ಮಾವಿನಕಾಯಿ ಮನೆ, ಹಿತ್ತಲು, ಹೊಲ, ಗದ್ದೆ ಯಾವುದೇ ಸ್ಥಳಗಳಲ್ಲಿ ಹಾವು ಕಂಡರೆ ಹೊಡೆಯಬೇಡಿ ನನಗೆ ತಿಳಿಸಿ ನಾನು ರಕ್ಷಿಸುತ್ತೇನೆ ಎನ್ನುತ್ತಾರೆ. ಹಾವುಗಳ ರಕ್ಷಣೆಗಾಗಿ ಸಿದ್ಧಾರೂಢನ ಮೊಬೈಲ್ ಸಂಖ್ಯೆ 7204888397ಕ್ಕೆ ಕರೆ ಮಾಡಿ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
19/05/2022 04:46 pm