ಕುಂದಗೋಳ : ತೋಟಕ್ಕೆ ಬಂದ್ ಹಾವು ಗೆಳೆಯರ ಸಮಯಪ್ರಜ್ಞೆ ಪೈಪ್ ಒಳಗೆ ಸೆರೆ

ಕುಂದಗೋಳ : ಹಾವು ಕಂಡರೇ ಅಬ್ಬಾ ! ಎಂದು ಎಂದು ಭಯ ಪಟ್ಟು ಓಡುವ ಜನರೇ ಜಾಸ್ತಿ, ಆದ್ರೇ, ಇಲ್ಲಿನ ಗೆಳೆಯರು ತಮ್ಮ ತೋಟದಲ್ಲಿ ಬಂದಿದ್ದ ಮಾರುದ್ಧ ಗಾತ್ರದ ನಾಗರ ಹಾವನ್ನು ಚಾಣಾಕ್ಷತೆಯಿಂದ ಪೈಪ್ ಒಳಗೆ ಸೆರೆ ಹಿಡಿದು ನಿರ್ಜನ ಪ್ರದೇಶದ ಹಳ್ಳಕ್ಕೆ ಬಿಟ್ಟಿದ್ದಾರೆ.

ಈ ವಿಡಿಯೋ ಒಮ್ಮೆ ಗಮನಿಸಿ ಕುಂದಗೋಳ ತಾಲೂಕಿನ ಪಶುಪತಿಹಾಳದ ಮೃತ್ಯುಂಜಯ ಹಡಪದ ಎಂಬುವವರು ತೋಟದಲ್ಲಿ ಗುರುವಾರ ಮಧ್ಯಾಹ್ನ ನಾಗರ ಹಾವೊಂದು ಕಾಣಿಸಿಕೊಂಡಾಗ ಪಕ್ಕದಲ್ಲೇ ಕೋಳಿ ಮರಿಗಳು, ಹಾಗೂ ಟಗರಿನ ಮರಿಗಳಿವೆ.

ಆ ಸಮಯಕ್ಕೆ ಗೆಳೆಯರ ಸಹಾಯದಿಂದ ತೋಟದಲ್ಲಿದ್ದ ಹಾವನ್ನು ಪಕ್ಕದಲ್ಲಿ ತೋಟಕ್ಕೆ ನೀರು ಹಾಯಿಸಲು ಇಟ್ಟಿದ್ದ ಪೈಪ್ ಎಡೆಗೆ ಸಪ್ಪಳ ಮಾಡುತ್ತಾ ಓಡಿಸಿ ಪೈಪ್ ಒಳಗೆ ಹಾವು ನುಗ್ಗಿದ್ದೇ ತಡ ಪೈಪ್ ಒಂದೇಡೆ ಚಪ್ಪಲಿ, ಒಂದೇಡೆ ಬಟ್ಟೆ ಹಿಡಿದು ಮೂವರು ಗೆಳೆಯರು ಬರೋಬ್ಬರಿ ಇಪ್ಪತ್ತು ಪೂಟ್ ಉದ್ದದ ಪೈಪ್'ನ್ನು ಎತ್ತಿಕೊಂಡು ಹೋಗಿ ಹಾವನ್ನು ಹಳ್ಳಕ್ಕೆ ಬಿಟ್ಟ ವಿಡಿಯೋ ಎಲ್ಲೇಡೆ ವೈರಲ್ ಆಗಿದ್ದು ಇಷ್ಟು ದೊಡ್ಡ ಗಾತ್ರದ ನಾಗರ ಹಾವನ್ನು ಸಮಯಕ್ಕೆ ಸರಿಯಾಗಿ ಬುದ್ಧಿ ಓಡಿಸಿ ಹಾವುನ್ನು ಯಾವುದೇ ಅಪಾಯವಿಲ್ಲದೆ ಹಿಡಿದ ಗೆಳೆಯರ ಬಗ್ಗೆ ಮೆಚ್ಚುಗೆ ಮಾತು ಕೇಳಿ ಬಂದಿವೆ.

Kshetra Samachara

Kshetra Samachara

14 days ago

Cinque Terre

70.53 K

Cinque Terre

4

 • ಹವ್ಯಾಸಿ ವರದಿಗಾರ ಮೃತ್ಯುಂಜಯ
  ಹವ್ಯಾಸಿ ವರದಿಗಾರ ಮೃತ್ಯುಂಜಯ

  Manjunath Yentruvi, ಧನ್ಯವಾದಗಳು ಅಣ್ಣರ

 • PRAVEEN KUMBI
  PRAVEEN KUMBI

  GOOD JOB SAVE THE SNAKE🐍

 • Manjunath Yentruvi
  Manjunath Yentruvi

  Manjunath Yentruvi ನಾಗರಹಾವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಹಳ್ಳಕ್ಕೆ ಬಿಟ್ಟ ಮೃತ್ಯುಂಜಯ ಅವರಿಗೆ ಧನ್ಯವಾದಗಳು

 • ಹವ್ಯಾಸಿ ವರದಿಗಾರ ಮೃತ್ಯುಂಜಯ
  ಹವ್ಯಾಸಿ ವರದಿಗಾರ ಮೃತ್ಯುಂಜಯ

  ಧನ್ಯವಾದಗಳು ಸರ ಮೂಲತ ಆ ಜೀವಿಗಳೇ ಭೂಮಿಯ ನಿವಾಸಿಗಳು.