ಗದಗ : ಲಾಕ್ ಡೌನ್ ಸಮಯದಲ್ಲೂ ಜಾನುವಾರುಗಳ ಹೊಟ್ಟೆಗೆ ಮೇವು

ಗದಗ : ಕೊರೊನಾ ಎರಡನೇ ಅಲೆಯ ತೀವ್ರತೆ ಅರಿತು ಸರ್ಕಾರ ಈಗಾಗಲೇ ಕೈಗೊಂಡಿರುವ ಲಾಕ್ ಡೌನ್ ಅವಧಿಯಲ್ಲಿ ಕೇವಲ ಮನುಕುಲ ಅಷ್ಟೇ ಅಲ್ಲದೆ ಪ್ರಾಣಿ ಪಕ್ಷಿ ಸಮೂಹಕ್ಕೂ ಸಂಕಷ್ಟ ಎದುರಾಗಿದೆ.

ಇಂತಹ ಸಂಕಷ್ಟಕ್ಕೆ ಕೈ ಜೋಡಿಸಿರುವ ಗದಗ ಜಿಲ್ಲೆಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವೂ ಜಾನುವಾರುಗಳಿಗೆ ಮೇವು ವಿತರಣೆ ಮಾಡುವ ಕಾಯಕಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿದೆ.

ಅದರಂತೆ ಇಂದಿನಿಂದ ಗದಗ - ಬೆಟಗೇರಿ ನಗರದಲ್ಲಿನ ಜಾನುವಾರುಗಳಿಗೆ ನಗರದೆಲ್ಲೇಡೆ ಸಂಚರಿಸಿ ಮೇವು ವಿತರಣೆ ಮಾಡುತ್ತಿದ್ದು ಆಸಕ್ತರು ಕೈ ಜೋಡಿಸುವಂತೆ ಮನವಿ ಮಾಡಿದೆ.

ಕೇವಲ ಮೇವು ವಿತರಣೆ ಅಷ್ಟೇ ಅಲ್ಲದೆ ರಕ್ತದಾನ ಪ್ಲಾಸ್ಮಾ ದಾನ ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯವು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳ ಜೊತೆ ಸಾರ್ವಜನಿಕರ ಸಹಕಾರ ಪಡೆದು ಇಂತಹ ಕಾರ್ಯಕ್ಕೆ ಮುಂದಾಗಿರುವುದು ವಿಶೇಷ.

ಒಟ್ಟಾರೆ ಲಾಕ್ ಡೌನ್ ಅವಧಿಯಲ್ಲಿ ಜಾನುವಾರುಗಳ ಹಸಿವು ನೀಗಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವೂ ಜಾನುವಾರುಗಳಿಗೆ ಮೇವು ನೀಡುವವರು ಇದ್ದಲ್ಲಿ ಆಸಕ್ತರು ವಿಶ್ವವಿದ್ಯಾಲಯದ ಸಂಶೋಧನಾ ಸಂಯೋಜಕ ಲಿಂಗರಾಜ ನಿಡುವಣಿ ಮೊಬೈಲ್ ಸಂಖ್ಯೆ 8050501377 ಸಂಪರ್ಕಿಸಲು ಕೋರಿದೆ.

Kshetra Samachara

Kshetra Samachara

9 days ago

Cinque Terre

45.04 K

Cinque Terre

1

  • Mahantesh melinmani
    Mahantesh melinmani

    adana.nodbeku adu PM.CM.kelsa janake kodolava akki.godhi yella lockdown agide adaku hotte ide kodi..tappenu adaku jeeva ide but.matadola aste mooka prani.ge bari uta niru saku