ಕುಂದಗೋಳ: ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಇಂದು ಬೆಳಗಿನಜಾವ ನಡೆದಿದೆ.
ಕಮಡೊಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶೇಖರ ಮರೆಪ್ಪನವರ ಎಂಬುವವರಿಗೆ ಸೇರಿದ ಹಸು ಒಂದು ಹೋರಿ ಕರು ಹಾಗೂ ಒಂದು ಆಕಳು ಕರುವಿಗೆ ಜನ್ಮ ನೀಡಿದೆ. ಎರಡೂ ಕರುಗಳು ಆರೋಗ್ಯವಾಗಿವೆ.
ನಿನ್ನೆಯಷ್ಟೇ ಮಾರುಕಟ್ಟೆಯಿಂದ ಮನೆಗೆ ತಂದ ಹಸು ಒಟ್ಟಿಗೆ ಎರಡು ಮರಿಗೆ ಜನ್ಮ ನೀಡಿದ್ದು, ಕುಟುಂಬಸ್ಥರಲ್ಲಿ ಸಂತಸವನ್ನುಂಟು ಮಾಡಿದೆ.
Kshetra Samachara
11/02/2021 02:28 pm