ನವಲಗುಂದ : ನವಲಗುಂದ ತಾಲ್ಲೂಕಿನಲ್ಲಿ ತುಂಬಿ ಹರಿಯುತ್ತಿರುವ ಬೆಣ್ಣೆ ಹಳ್ಳದ ರಬಸಕ್ಕೆ ಅಕ್ಕ ಪಕ್ಕದಲ್ಲಿನ ಸಂಪೂರ್ಣ ಜಮೀನುಗಳನ್ನು ಹಳ್ಳ ನುಂಗಿದೆ. ಅಷ್ಟೇ ಅಲ್ಲದೇ ಬೆಣ್ಣೆ ಹಳ್ಳ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಈ ಹಿನ್ನೆಲೆ ತಹಶೀಲ್ದಾರ್ ಹಾಗೂ ನೋಡಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.
ಇನ್ನು ತಾಲೂಕಿನ ಯಮನೂರ ಗ್ರಾಮದ ಬಳಿ ಇರುವ ಬೆಣ್ಣೆ ಹಳ್ಳ ಸೇರಿದಂತೆ ಕಾಲವಾಡ ಗ್ರಾಮಕ್ಕೆ ನೋಡಲ್ ಅಧಿಕಾರಿಗಳಾದ ಸುಧೀರ್ ಸಾವಕಾರ್ ಅವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ಅನಿಲ ಬಡಿಗೇರ ಹಾಗೂ ಕಂದಾಯ ನಿರೀಕ್ಷಕರು ಮೊರಬ ನೇತೃತ್ವದಲ್ಲಿ ಪ್ರವಾಹ, ಮಳೆಯಿಂದಾಗಿ ಹಾನಿಯ ಬಗ್ಗೆ ಬೆಣ್ಣಿ ಹಳ್ಳ ಹಾಗೂ ಹಾನಿಯಾದ ಮನೆಗಳನ್ನು ಪರಿಶೀಲಿಸಲಾಯಿತು.
Kshetra Samachara
21/05/2022 09:10 am