ಧಾರವಾಡ: ಅವರೊಬ್ಬ ಕಾರು ರಿಪೇರಿ ಮಾಡುವ ಮೆಕ್ಯಾನಿಕಲ್. ಆದ್ರೆ, ಆ ಪುಟ್ಟ ಪಕ್ಷಿ ಮೇಲಿರುವ ಅವರ ಪ್ರೀತಿ ನೋಡಿದ್ರೆ ಎಂತವರು ಕೂಡ ಮೆಚ್ಚುಗೆ ವ್ಯಕ್ತಪಡಿಸದೇ ಇರಲಾರರು.
ಇವರ ಹೆಸರು ಮಂಜುನಾಥ ಭಂಡಾರಿ. ಧಾರವಾಡದ ಕಮಲಾಪುರದಲ್ಲಿರುವ ಎಲ್.ಜಿ.ಮೋಟರ್ಸ್ ನಲ್ಲಿ ಕಾರು ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ರಸ್ತೆಯಲ್ಲಿ ಚಿಕ್ಕ ಗುಬ್ಬಿ ಮರಿ ಬಿದ್ದಿತ್ತಂತೆ. ಇದಕ್ಕೆ ಟೇಲರ್ ಬರ್ಡ್ ಎಂತಲೂ ಕರೆಯುತ್ತಾರೆ. ರೆಕ್ಕೆ ಇಲ್ಲದೇ ರಸ್ತೆಯಲ್ಲಿ ಬಿದ್ದಿದ್ದ ಈ ಗುಬ್ಬಿ ಮರಿಯನ್ನು ಕಂಡ ಮಂಜುನಾಥ, ಅದನ್ನು ತೆಗೆದುಕೊಂಡು ಬಂದು ಅದಕ್ಕೆ ಬ್ರೆಡ್ ಹಾಗೂ ಅನ್ನವನ್ನು ಸಣ್ಣ ಸಣ್ಣ ಚೂರನ್ನಾಗಿ ಮಾಡಿ ಹಾಕಿ ಜೋಪಾನ ಮಾಡುತ್ತಿದ್ದಾರೆ. ಇದೀಗ ಆ ಗುಬ್ಬಿ ಮರಿಗೆ ರೆಕ್ಕೆ ಕೂಡ ಬಂದಿವೆ. ಮಂಜುನಾಥ ಅದಕ್ಕೆ ಹಾರಲು ಕೂಡ ಕಲಿಸುತ್ತಿದ್ದಾರೆ.
ತಮ್ಮ ಕೆಲಸದ ಒತ್ತಡದ ನಡುವೆಯೂ ಸಹನೆಯಿಂದ ಆ ಗುಬ್ಬಿ ಮರಿಗೆ ಆಹಾರ ನೀಡುತ್ತಿರುವ ಮಂಜುನಾಥ ಅವರ ಈ ಪಕ್ಷಿ ಪ್ರೇಮಕ್ಕೆ ನಾವೂ ಒಂದು ಮೆಚ್ಚುಗೆ ವ್ಯಕ್ತಪಡಿಸಲೇಬೇಕಲ್ಲವೇ?
Kshetra Samachara
16/11/2020 01:50 pm