ಪಬ್ಲಿಕ್ ನೆಕ್ಸ್ಟ್ ವಿಶೇಷ : ಪ್ರಶಾಂತ ಲೋಕಾಪುರ
ಧಾರವಾಡ : ಎಲ್ಲಿ ನೋಡಿದರೂ ಕಲರ್ ಕಲರ್ ಪಕ್ಷಿಗಳ ಕಲರವ..ದೇಶದ ವಿವಿಧ ಭಾಗಗಳಲ್ಲಿರುವ ಪಕ್ಷಿಧಾಮ ವನ್ಯಜೀವಿ ಧಾಮ ಮತ್ತು ರಾಷ್ಟ್ರೀಯ ಪಾರ್ಕ್ ಮತ್ತಿತರೆಡೆ ಕ್ಲಿಕ್ಕಿಸಿದ 50 ಕ್ಕೂ ಹೆಚ್ಚು ಛಾಯಾಚಿತ್ರಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ ದೇಶಪಾಂಡೆ ಸಭಾಭವನ..
ಹೌದು. ಧಾರವಾಡದಲ್ಲಿ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸದಾಶಿವ ಮರ್ಜಿ ಅವರ ಕ್ಯಾಮೆರಾಗಳಲ್ಲಿ ಸೆರೆ ಸಿಕ್ಕ ಪಕ್ಷಿ ಕಲರವ,ಹಲವು ವರ್ಷಗಳಿಂದ ಹವ್ಯಾಸಿ ಛಾಯಾಗ್ರಾಹಕರಾಗಿರುವ ಮರ್ಜಿ ಅವರು ಧಾರವಾಡದ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿರುವ ಹತ್ತು ಹಲವು ಪಕ್ಷಿ ಸಂಕುಲದ ಛಾಯಾಚಿತ್ರಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂಘವು 65 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ.ಸದಾಶಿವ ಮರ್ಜಿ ಅವರ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನವನ್ನು ಇಂದಿನಿಂದ ಮೂರು ದಿನಗಳ ಕಾಲ ಪ್ರದರ್ಶನ ಏರ್ಪಡಿಸಿದ್ದು,ಈ ಪ್ರದರ್ಶನವನ್ನು ಖ್ಯಾತ ಛಾಯಾ ಗ್ರಾಹಕ ಶಶಿ ಸಾಲಿ ಉದ್ಘಾಟಿಸಿ ಚಾಲನೆ ನೀಡಿದರು.
ಛಾಯಾಚಿತ್ರ ಸೆರೆಹಿಡಿದ ಸ್ಥಳಗಳು
ಪಕ್ಷಿಗಳ ಕರ್ನಾಟಕದ ರಂಗನತಿಟ್ಟು ಶಿವಮೊಗ್ಗ ಜಿಲ್ಲೆಯ ಗುಡವಿ,ಗದಗ ಜಿಲ್ಲೆಯ ಮಾಗಡಿ, ದರೋಜಿ ,ಕರಡಿಧಾಮ, ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡುಗಳು,ಧಾರವಾಡದ ಸುತ್ತಮುತ್ತಲಿನ ಪರಿಸರದಲ್ಲಿ ಸೆರೆಹಿಡಿದ ಛಾಯಾಚಿತ್ರಗಳು ನೋಡುಗರ ವಿಶ್ವ ವಿಖ್ಯಾತ ಪಕ್ಷಿ ಸಂಕುಲ ತಾಣಗಳಾದ ಓಲ್ಡ್ ಮ್ಯಾಗಜೀನ್ ಹೌಸ್ ಕಣ್ಮನ ಸೆಳೆದವು.
ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಸದಾಶಿವ ಮರ್ಜಿ,ವಿದೇಶಗಳಿಂದ ಪಕ್ಷಿಗಳು ನವೆಂಬರ್ ತಿಂಗಳಿಗೆ ಬರುತ್ತವೆ,ಮಾರ್ಚ್ ವರೆಗೆ ಈ ಭಾಗದಲ್ಲಿ ಕಾಣಿಸಿಕೊಂಡು.ಮಾರ್ಚ್ ತಿಂಗಳಿನಲ್ಲಿ ಹೋಗುತ್ತವೆ.30 ಸಾವಿರ ಪಕ್ಷಿಗಳು ಬಂದಿರುತ್ತವೆ.
ಕೆಲವು ರಾಜಸ್ಥಾನದ ಭರತಪುರದಲ್ಲಿ ಸೇರಿದಂತೆ
ದಾಂಡೇಲಿಯ ವಿಶ್ವ ವಿಖ್ಯಾತ ಪಕ್ಷಿ ಸಂಕುಲ ತಾಣಗಳಾದ ಓಲ್ಡ್ ಮ್ಯಾಗಜೀನ್ ಹೌಸ್ ಛಾಯಾಚಿತ್ರ ಸೆರೆಹಿಡಿಯಲಾಗಿದೆ ಎಂದರು.
ಸುಮಾರು 50ಕ್ಕೂ ಹೆಚ್ಚು ಪಕ್ಷಿಗಳ ಛಾಯಾಚಿತ್ರಗಳನ್ನು ಪ್ರದರ್ಶನದ ಇಟ್ಟಿದ್ದು...ದೇಶ ವಿದೇಶದ ಪಕ್ಷಿಗಳ ನೋಡಿ ಸಂತಸ ಹಂಚಿಕೊಂಡರು ಸಾರ್ವಜನಿಕರು.
Kshetra Samachara
03/11/2020 08:18 am