ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಜಗತ್ತು ಆಧುನಿಕತೆ ಎಡೆಗೆ ಓಡಿದಷ್ಟು ಕೃಷಿ ಕ್ಷೇತ್ರ ಕಣ್ಮರೆಯಾಗಿ ಕಮರ್ಷಿಯಲ್ ವ್ಯವಹಾರಗಳೇ ಕಣ್ಣಿಗೆ ಬೀಳ್ತವೆ ಇದರ ನಡುವೆ ಇಲ್ಲೋಬ್ಬ ಬಿ.ಕಾಮ್ ಪದವೀಧರ ಇರೋ ಎರಡೇ ಎಕರೆ ಭೂಮಿಯಲ್ಲಿ ಹಸಿರು ಧರೆ ಸೃಷ್ಟಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಸದ್ಯ ಹೆಬ್ಬೆವು, ಶ್ರೀಗಂಧ ಬೆಳೆ ಪ್ರಮುಖವಾಗಿದ್ದು ಇಂತಹ ಬೆಳೆಯನ್ನು ಭೂತಾಯಿ ಒಡಲಲ್ಲಿ ಸ್ವ ಗ್ರಾಮ ಶರೇವಾಡದಲ್ಲಿ ಬೆಳೆದ ಚಿದಾನಂದ ಉಳ್ಳಾಗಡ್ಡಿ ಹಸಿರು ಧರೆ ಸೃಷ್ಟಿಸಿ ತಮ್ಮೂರಷ್ಟೇ ಅಲ್ಲದೆ ಪರ ಊರಿನ ರೈತರು ಮಾಹಿತಿ ಕೇಳಿಕೊಂಡು ಬರುವಷ್ಟರ ಮಟ್ಟಿಗೆ ಫೇಮಸ್ ಆಗಿದ್ದಾರೆ.
ಈ ಆಕಾಶಕ್ಕೆ ಹಸಿರು ಹೊದಿಕೆ ನೀಡಿದಂತಿರುವ ಹೆಬ್ಬೆವಿನ ಮರಗಳನ್ನ ಬೆಳಸಿ ಇಂದಿಗೆ ಬರೋಬ್ಬರಿ ಹತ್ತು ತಿಂಗಳು ಕಳೆದಿದ್ದು 22 ದಿಂದ 25 ಅಡಿ ಎತ್ತರಕ್ಕೆ ಬೆಳೆದಿವೆ, ಈ ಹೆಬ್ಬೆವಿನ ನಡುವೆ ಶ್ರೀಗಂಧ ಗಿಡಗಳು ಹತ್ತಡಿ ಬೆಳೆದಿದ್ದು ಲಾಭ ಕಳೆಯನ್ನು ಹೊತ್ತು ಮುಗಿಲು ಮುಟ್ಟತ್ತಲಿವೆ.
ತಮ್ಮ ಎರೆಡು ಎಕರೆ ಜಮೀನಿನಲ್ಲಿ ನೀರಾವರಿ ಮೂಲಕ 1000 ಹೆಬ್ಬೆವಿನ ಮರ 500 ಶ್ರೀಗಂಧದ ಗಿಡ ಬೆಳೆದಿದ್ದು ನಿತ್ಯವು ಮರ-ಗಿಡಗಳ ನಿರ್ವಹಣೆ ಮಾಡುತ್ತಾ ಜೊತೆಗೆ ಹತ್ತಿ, ಸೋಯಾಬಿನ್ ಬೆಳೆಯನ್ನು ಬೆಳೆದಿದ್ದಾರೆ ಹೆಬ್ಬೆವು ಶ್ರೀಗಂಧ ಸಸಿಗಳ ಮಾರಾಟವನ್ನು ಮುಂದುವರೆಸಿರುವ ಚಿದಾನಂದ ಉಳ್ಳಾಗಡ್ಡಿಯವರನ್ನು ಆಸಕ್ತ ರೈತರು ಸಂಪರ್ಕಿಸಿ ಮೊಬೈಲ್ ಸಂಖ್ಯೆ 80732 56115 ತಾವು ಈ ಕೃಷಿ ಕ್ಷೇತ್ರದಲ್ಲಿ ತೊಡಗಬಹುದು.
Kshetra Samachara
13/10/2020 09:51 am