ಹುಬ್ಬಳ್ಳಿ- ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ, ಧಾರವಾಡ ಜಿಲ್ಲೆಯಲ್ಲಿ ಕಳೆದ ನಾಲ್ಕು ಗಂಟೆಯಿಂದ ವರುಣನ ಆರ್ಭಟ ಮುಂದು ವರೆದಿದ್ದು, ನಗರದ ಗಬ್ಬೂರ ಬಳಿ ಇರುವ ಕುಂದಗೋಳ ಕ್ರಾಸ್ ದಲ್ಲಿ ಹಳ್ಳ ಹರಿಯುತ್ತಿರುವ ಹಿನ್ನಲೆಯಲ್ಲಿ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು.
ಕೊಂಚ ಮಟ್ಟಿಗೆ ಮಳೆರಾಯ ಬಿಡುವು ಮಾಡಿಕೊಟ್ಟ ನಂತರ ನೀರು ಕಡಿಮೆ ಆಗಿದ್ದು, ಬ್ರಿಜ್ ಗೆ ಹಾಕಿರುವ ಬ್ಯಾರಿಕೇಡ ಬಿದ್ದಿದ್ದನ್ನು ಸ್ವತಃ ಸಾರ್ವಜನಿಕರೆ ತೆಗೆದು ರಸ್ತೆ ಕ್ಲೀಯರ್ ಮಾಡಿಕೊಂಡು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
Kshetra Samachara
05/10/2020 09:18 pm