ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅತಿವೃಷ್ಟಿಯಿಂದ ಧಾರವಾಡ ಜಿಲ್ಲೆಯಲ್ಲಿ 500 ಕೋಟಿ ರೂ. ಹಾನಿ.!

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಳೆದ ಜುಲೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸುಮಾರು 500 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ, ಬೆಳೆ ಹಾನಿಯಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಮೂಲಕ ಸೂಕ್ತ ಪರಿಹಾರ ಒದಗಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಂದು ಧಾರವಾಡ ಜಿಲ್ಲೆಗೆ ಆಗಮಿಸಿದ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಸಂಜೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಅಧ್ಯಯನ ತಂಡಕ್ಕೆ ಅತಿವೃಷ್ಠಿ ಹಾನಿ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ದೊರಕುವ ನಿರೀಕ್ಷೆಯಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ನವಲಗುಂದ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಯಮನೂರಿನ ಪ್ರಾಥಮಿಕ ಶಾಲೆ, ಮಹಾದೇವಿ ಸಿದ್ದಲಿಂಗಪ್ಪ ಬ್ಯಾಳಿ ಅವರ ಜಮೀನಿನಲ್ಲಿ ಹೆಸರು ಬೆಳೆ ಹಾಗೂ ನವಲಗುಂದ ರೈತ ಮಲ್ಲಪ್ಪ ಬಸಪ್ಪ ಕೊಲ್ಲೆದ್ ಅವರ ಜೀಮಿನಲ್ಲಿನ ಈರುಳ್ಳಿ ಬೆಳೆಯನ್ನು, ಭಾರತ ಸರ್ಕಾರದ ಜಲಶಕ್ತಿ ಮಂತ್ರಾಲಯದ ಜೆ.ಗುರುಪ್ರಸಾದ, ಹಣಕಾಸು ಮಂತ್ರಾಲಯದ ಉಪಕಾರ್ಯದರ್ಶಿ ಮಹೇಶ್ ಕುಮಾರ್ ಅವರ ಅಧ್ಯಯನ ತಂಡ ಭೇಟಿ ಪರಿಶೀಲಿಸಿತು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಎನ್.ಡಿ.ಆರ್.ಆಫ್.ಮಾರ್ಗದರ್ಶಿ ಸೂತ್ರಗಳ ಪ್ರಕಾರ 45.5 ಕೋಟಿ ರೂ. ಪರಿಹಾರ ದೊರಕಲಿದೆ. ಕೇಂದ್ರದಿಂದ ಹೆಚ್ಚಿನ ಪರಿಹಾರ ಬಂದ ತಕ್ಷಣ ನೆರೆಯಿಂದ ಹಾನಿಗಿಗೊಳದ ಮನೆ,ಶಾಲೆ, ಅಂಗನವಾಡಿ ಹಾಗೂ ಇತರೆ ಪ್ರದೇಶಗಳಿಗೆ ಹಣ ಬಿಡುಗಡೆ ಮಾಡಲಾಗುವುದು. ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಅಧ್ಯಯನ ತಂಡ ನೆರೆ ವರದಿಯನ್ನು ಒಪ್ಪಿದ್ದು, ಇಂದಿನ ಪ್ರವಾಸ ಫಲಪ್ರದವಾಗಿದೆ ಎಂದರು.

ಈರುಳ್ಳಿ ಬೆಳೆದ ರೈತ ಮಲ್ಲಪ್ಪ ಬಸಪ್ಪ ಕೊಲ್ಲೆದ್ ಮಾತನಾಡಿ ನೆರೆಯಿಂದಾಗಿ ಈರಿಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಎಕರೆಗೆ 70ರಿಂದ 80 ಕ್ವಿಂಟಾಲ್ ಈರುಳ್ಳಿ ಬೆಳೆಯುವ ನಿರೀಕ್ಷೆಯಿತ್ತು. ಆದರೆ 5 ಕ್ವಿಂಟಾಲ್ ಸಹಿತ ಈರುಳ್ಳಿ ಬರುತ್ತಿಲ್ಲ. ತುಂಬಾ ನಷ್ಟ ಸಂಭವಿಸಿದೆ ಎಂದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ್ ಕುಮಾರ್ ಮಾತನಾಡಿ, ನವಲಗುಂದ ತಾಲೂಕಿನಲ್ಲಿ ಒಟ್ಟು 5920 ಹೆಕ್ಟೇರ್ ಹಾಗೂ ಅಣ್ಣಿಗೇರಿ ತಾಲೂಕು ವ್ಯಾಪ್ತಿಯ 3400 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ನವಲಗುಂದ ವ್ಯಾಪ್ತಿಯಲ್ಲಿ 3418 ಹೆಕ್ಟೇರ್ ಹಾಗೂ ಅಣ್ಣಿಗೇರಿ ವ್ಯಾಪ್ತಿಯಲ್ಲಿ 1400 ಹೆಕ್ಟೇರ್ ಈರುಳ್ಳಿ ಬೆಳೆ ಅತಿವೃಷ್ಠಿಯಿಂದ ನಾಶವಾಗಿದೆ. ನವಲಗುಂದ ತಾಲ್ಲೂಕಿನಲ್ಲಿ 2099 ಹೆಕ್ಟೇರ್ ಹಾಗೂ ಅಣ್ಣಿಗೇರಿ ವ್ಯಾಪ್ತಿಯಲ್ಲಿ 1444 ಹೆಕ್ಟೇರ್ ಈರುಳ್ಳಿ ಬೆಳೆ ಬೆಳೆವಿಮೆ ವ್ಯಾಪ್ತಿಗೆ ಒಳಪಟ್ಟಿದೆ. ಈರುಳ್ಳಿ ಬೆಳೆ ಹಾನಿಯಿಂದ ರೈತರಿಗೆ ಹೆಚ್ಚಿನ ಆರ್ಥಿಕ ನಷ್ಟವಾಗಿದೆ ಎಂದರು.

Edited By : Vijay Kumar
Kshetra Samachara

Kshetra Samachara

05/09/2021 07:24 pm

Cinque Terre

36.87 K

Cinque Terre

1

ಸಂಬಂಧಿತ ಸುದ್ದಿ