ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮಳೆಗೆ ಯರೇಬೂದಿಹಾಳ ಜಲಾವೃತ, ಗ್ರಾಪಂ ಕಚೇರಿಗೆ ಮುತ್ತಿಗೆ

ಕುಂದಗೋಳ: ಧಾರಾಕಾರ ಮಳೆಗೆ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದ ಮನೆಗಳಿಗೆ ನೀರು ನುಗ್ಗುತ್ತಿದ್ದು, ರಸ್ತೆಗಳೆಲ್ಲಾ ಜಲಾವೃತವಾಗಿ ಜನ ಸಂಚಾರ ದುಸ್ತರವಾಗಿ ಗ್ರಾಪಂ ಕಚೇರಿಗೆ ಜನ ಮುತ್ತಿಗೆ ಹಾಕಿದ್ದಾರೆ.

ಹೌದು. ನೀರು ಹರಿದು ಹೋಗಬೇಕಿದ್ದ ಜಮೀನು ವಿವಾದಕ್ಕೆ ಸಿಲುಕಿದ ಕಾರಣ ನೀರು ಜನ ವಸತಿ ಪ್ರದೇಶಗಳಿಗೆ ವೇಗವಾಗಿ ನುಗ್ಗುತ್ತಿದ್ದು, ಮನೆಗಳಲ್ಲಿ ನೀರು ಭರ್ತಿಯಾಗಿ ಮೋಟಾರು ಮೂಲಕ ಬಕೆಟ್ ತುಂಬಿ ನೀರು ಹೊರ ಹಾಕುತ್ತಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ಯರೇಬೂದಿಹಾಳ ಈ ಸಮಸ್ಯೆಗೆ ಸಿಲುಕಿದರು ತಾಲೂಕು ಆಡಳಿತ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದು, ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿ ರೈತರು ಬೀಜ ಗೊಬ್ಬರ ಸಂಗ್ರಹಿಸಿ ಇಡುವುದು ಸವಾಲಾಗಿ ಜನ ಗಾಪಂ ಕಚೇರಿ ಎದುರು ಮಾತಿನ ಭರಾಟೆ ನಡೆಸಿದ್ದಾರೆ.

ಗ್ರಾಮಕ್ಕೆ ನೀರು ನುಗ್ಗುತ್ತಿರುವ ಸಮಸ್ಯೆ ಅರಿತು ಲೋಕೋಪಯೋಗಿ ಅಧಿಕಾರಿ ಹಾಗೂ ತಹಶೀಲ್ದಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಪರಿಹಾರ ಸಿಕ್ಕಿಲ್ಲಾ.

ಒಟ್ಟಾರೆ ಮಳೆ ಹೆಚ್ಚಿದಂತೆಲ್ಲಾ ಯರೇಬೂದಿಹಾಳ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದು, ಗ್ರಾಮಕ್ಕೆ ನುಗ್ಗುವ ನೀರಿನ ಪ್ರಮಾಣ ಮಾತ್ರ ಏರುತ್ತಲಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/05/2022 12:41 pm

Cinque Terre

64.27 K

Cinque Terre

0

ಸಂಬಂಧಿತ ಸುದ್ದಿ