ನರಗುಂದ: ಬೆಳ್ಳಂಬೆಳಿಗ್ಗೆ ಹಾವೊಂದು ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಘಟನೆ ನರಗುಂದ ಪಟ್ಟಣದ ಶಾಸಕರ ಸರ್ಕಾರಿ ಮಾದರಿಯ ಶಾಲೆಯಲ್ಲಿ ನಡೆದಿದೆ. ಸಕಾಲಕ್ಕೆ ಬಂದ ಸ್ನೇಕ್ ಬುಡ್ಡಾ ಹಾವನ್ನು ಹಿಡಿದು ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿಸಿದ್ದಾರೆ.
ಹೌದು..ಗದಗ ಜಿಲ್ಲೆ ನರಗುಂದ ಪಟ್ಟಣದ ಶಾಸಕರ ಸರಕಾರಿ ಮಾದರಿ ಕೇಂದ್ರ ಶಾಲೆಯ ನಲಿ ಕಲಿ ಕ್ಲಾಸ್ ರೂಂನಲ್ಲಿ ಹಾವು ಕಾಣಿಸಿಕೊಂಡಿದೆ. ಆದರೆ ಹಾವನ್ನು ಗಮನಿಸದೇ ಕೆಲವು ಸಮಯ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಲವು ಸಮಯದ ನಂತರ ಹಾವು ಕಂಡು ಭಯಗೊಂಡ ಶಾಲಾ ಮಕ್ಕಳು ಕ್ಲಾಸ್ ರೂಂನಿಂದ ಓಡಿ ಹೋಗಿದ್ದಾರೆ.
ಇನ್ನೂ ಉರಗ ರಕ್ಷಕ ಬುಡ್ಡಾ ಸುರೇಬಾನ ಆಗಮಿಸಿ ಹಾವು ರಕ್ಷಣೆ ಮಾಡಿದ್ದು, ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಐದು ಅಡಿ ಉದ್ದದ ಕೆರೆ ಹಾವನ್ನು ರಕ್ಷಿಸಿದ ಸ್ನೇಕ್ ಬುಡ್ಡಾ ಅವರಿಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
21/07/2022 05:27 pm