ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮೊದಲಿಗೆ ಒಂದೇ ಬಂತು.. ಆ ನಂತರ ಹಿಂಡೇ ಜಮಾಯಿಸ್ತು..!

ಧಾರವಾಡ: ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಎದುರಿಗೆ ಮಂಗಗಳ ಚೆಲ್ಲಾಟ ಎಲ್ಲರೂ ನಿಂತು ನೋಡುವಂತೆ ಮಾಡಿತು.

ಹೌದು! ಅಂಗಡಿ ಮುಂದೆ ನಿಂತಿದ್ದ ಒಬ್ಬ ವ್ಯಕ್ತಿ ಮಂಗವೊಂದನ್ನು ನೋಡಿ ಅದಕ್ಕೆ ಬಾಳೆಹಣ್ಣು ಕೊಟ್ರು. ಅದನ್ನು ತೆಗೆದುಕೊಂಡು ಹೋದ ಆ ಮಂಗ ಮರಳಿ ಒಂದು ಹಿಂಡನ್ನೇ ಅಲ್ಲಿಗೆ ಕರೆದುಕೊಂಡು ಬಂತು.

ಆ ವ್ಯಕ್ತಿ ಮತ್ತೆ ನಾಲ್ಕೈದು ಮಂಗಗಳಿಗೆ ಬಾಳೆ ಹಣ್ಣು ಕೊಟ್ರು. ಅವುಗಳನ್ನು ತೆಗೆದುಕೊಂಡು ಹೋದ ಮಂಗಗಳು ಪದೇ ಪದೇ ಅಂಗಡಿ ಎದುರೇ ನಿಂತು ಯಾರಾದರೂ ಏನಾದರೂ ಕೊಡುತ್ತಾರೇನೋ ಎಂದು ಕಾದುಕೊಂಡು ಕುಳಿತಿದ್ದವು. ಕೆಲವರು ಶೇಂಗಾ, ಬಾಳೆಹಣ್ಣು, ಚೀಪ್ಸ್ ಪ್ಯಾಕೇಟ್ ಗಳನ್ನು ನೀಡಿದರು.

ಅವುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮಂಗಗಳು ಒಂದು ರೀತಿ ಚೆಲ್ಲಾಟವನ್ನೇ ನಡೆಸಿದವು. ಮಂಗಗಳ ಈ ಚೆಲ್ಲಾಟವನ್ನು ಜನ ನಿಂತು ನೋಡುವಂತೆ ಮಾಡಿತು.

Edited By : Nagesh Gaonkar
Kshetra Samachara

Kshetra Samachara

23/09/2020 11:44 am

Cinque Terre

45.55 K

Cinque Terre

0

ಸಂಬಂಧಿತ ಸುದ್ದಿ