ಹುಬ್ಬಳ್ಳಿ: ಅತಿವೃಷ್ಠಿ,ಅನಾವೃಷ್ಠಿಯಿಂದ ಬೇಸತ್ತಿರುವ ರೈತ ಸಮುದಾಯಕ್ಕೆ ಬೆಳೆದ ಬೆಳೆಯನ್ನು ಕೈಗೆತ್ತಿಕೊಳ್ಳುವಲ್ಲಿ ಮತ್ತೊಂದು ಆತಂಕ ಎದುರಾಗಿದೆ.ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿರುವ ಸ್ಥಿತಿಯೊಂದು ಕಲಘಟಗ ತಾಲೂಕಿನ ಬಿರವಳ್ಳಿ ಗ್ರಾಮದ ಹೊರ ವಲಯದಲ್ಲಿ ನಿರ್ಮಾಣವಾಗಿದೆ.
ಹೌದು..ಬಿರವಳ್ಳಿ ಗ್ರಾಮದ ಹೊರವಲಯದ ಹೊಲಗಳಿಗೆ ಲಗ್ಗೆ ಇಟ್ಟಿರುವ ಕಾಡಾನೆಯ ಗುಂಪು ರೈತ ಬೆಳೆಯನ್ನು ಹಾನಿ ಮಾಡುತ್ತಿವೆ.ಇದರಿಂದ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಕೂಡ ಭಯ ಪಡುವಂತಾಗಿದೆ.ಇಷ್ಟುದಿನ ಲಾಕ್ ಡೌನ್ ಕಾರಣದಿಂದ ಹೊರ ಬರದಿರುವ ರೈತರು ಈಗ ಕೊಂಚ ನಿರಾಳತೆಯಿಂದ ಕೃಷಿ ಮಾಡಲು ಅವಕಾಶ ಸಿಕ್ಕಿತು ಎನ್ನುವಷ್ಟರಲ್ಲಿಯೇ ಕಾಡಾನೆ ಗೋವಿನ ಜೋಳದ ಹೊಲಕ್ಕೆ ಲಗ್ಗೆ ಇಟ್ಟಿದ್ದು,ಸಾಕಷ್ಟು ಪ್ರಮಾಣದಲ್ಲಿ ಹಾನಿ ಮಾಡಿದೆ ಎಂದು ರೈತರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಐದರಿಂದ ಆರು ಆನೆಗಳು ಹೊಲಕ್ಕೆ ಆಗಮಿಸಿ ಬೆಳೆಯನ್ನು ಹಾನಿ ಮಾಡುತ್ತಿರುವುದನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ.
Kshetra Samachara
02/12/2020 03:46 pm