ಕಲಘಟಗಿ: ಪಟ್ಟಣದಲ್ಲಿನ ಜಲಮೂಲಗಳಲ್ಲಿ ಒಂದಾಗಿರುವ ಬಾವಿಗಳು ಅವಸಾನದಂಚಿಗೆ ತಳ್ಳಲ್ಪಟ್ಟು ಕಣ್ಮರೆಯಾಗುತ್ತಿವೆ.
ಶುದ್ಧ ಜೀವಜಲದ ತಾಣಗಳಾದ ಬಾವಿಗಳು ಕಣ್ಮರೆಯಾಗುತ್ತಿವೆ.ಈಗ ಅಲ್ಲೊಂದು ಇಲ್ಲೊಂದು ಬಾವಿಗಳು ಮಾತ್ರ ಕಾಣ ಸಿಗುತ್ತವೆ.ಇರುವ ಕೆಲವೇ ಬಾವಿಗಳಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ.ಬೇರೆ ಜಲಮೂಲಗಳಿಂದಾಗಿ ಇಂದು ಬಾವಿಗಳು ನಿರ್ಲಕ್ಷಕ್ಕೆ ಒಳಗಾಗಿವೆ.
ಹಲವು ವರ್ಷಗಳ ಹಿಂದೆ ಬರಗಾಲದ ಸಮಯದಲ್ಲೂ ಜೀವ ಜಲನೀಡಿದ ಬಾವಿಗಳು ಅವಸಾನದಂಚಿನಲ್ಲಿ ಇದ್ದು ಇವುಗಳಿಗೆ ಕಾಯಕಲ್ಪ ನೀಡ ಬೇಕಿದೆ.
Kshetra Samachara
10/11/2020 12:42 pm