ಅಣ್ಣಿಗೇರಿ: ನಾವೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬ ಗಾದೆ ಮಾತಿನ ಹಾಗೆ, ರೈತ ಅಂದುಕೊಂಡ ಹಾಗೆ ಈ ಸಲದ ಮುಂಗಾರು ರೈತನ ಕೈ ಹಿಡಿಯಲಿಲ್ಲ. ಮುಂಗಾರು ಬಿತ್ತನೆಯವರೆಗೆ ಎಲ್ಲ ರೀತಿಯಿಂದ ಸರಿ ಹೋಗುತ್ತಿದೆ ಎಂದು ಕೊಳ್ಳುತ್ತಿದ್ದ ರೈತನಿಗೆ ಈಗ ಅತಿವೃಷ್ಟಿ ಮಳೆಯಿಂದಾಗಿ ನಿರಾಸೆ ಉಂಟಾಗಿದೆ.
ಹೆಸರು ಬಿತ್ತನೆಯಾದ ನಂತರ ಇನ್ನೇನು ಕೈಗೆ ಬರುತ್ತದೆ ಎನ್ನುವಷ್ಟರಲ್ಲಿ. ಅತಿಯಾದ ಮಳೆ ಗಾಳಿಗೆ ಎಲ್ಲವೂ ನೆಲಕಚ್ಚಿ ಹೋಗಿ ಅಷ್ಟು ಇಷ್ಟು ಉಳಿದ ಹೆಸರನ್ನು ಈಗ ರೈತ ಕಟಾವು ಮಾಡಿಸಿ ಒಕ್ಕಲಿ ಮಾಡಬೇಕು ಅನ್ನುವಷ್ಟರಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆರಾಯನ ಆರ್ಭಟ ಜೋರಾಗಿ ಹೆಸರಿನ ರಾಶಿಗೆ ನೀರು ನುಗ್ಗಿ ಹೆಸರೆಲ್ಲ ಮೊಳಕೆ ಒಡೆದು ಹೋಗಿದ್ದರಿಂದ ರೈತ ಕೈಚೆಲ್ಲಿ ಕೂರುವಂತಾಗಿದೆ.
ಇತ್ತ ಕಡೆ ಸರ್ಕಾರದಿಂದ ಬೆಳೆ ಪರಿಹಾರವೂ ಇಲ್ಲ, ಬೆಂಬಲ ಬೆಳೆಯ ಹೆಸರು ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ ,ಹೀಗೆ ಹಲವಾರು ಸಮಸ್ಯೆಗಳ ನಡುವೆ ಸಾಲದ ಸುಳಿಯಲ್ಲಿ ಸಿಕ್ಕು ನರಳುವಂತ ಪರಿಸ್ಥಿತಿ ಬಂದೊದಗಿದೆ. ಒಟ್ಟಾರೆಯಾಗಿ ಬರುವ ದಿನಗಳಲ್ಲಿ ರೈತ ಇನ್ನೂ ಏನೇನು ಅನುಭವಿಸ ಬೇಕು ಎಂಬ ಪ್ರಶ್ನೆ ಕಾಡುತ್ತಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಬೇಕಾಗಿದೆ.
ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
28/08/2022 11:34 am