ಕುಂದಗೋಳ : ಸಂಜೆ ಯಾದ್ರೇ ಸಾಕು ದೋ ಎಂದು ಸುರಿಯುವ ಮಳೆ, ಕೃಷಿ ಭೂಮಿಯಲ್ಲಿ ಹರಗದೆ ಉಳಿದ ಬಿಟಿ ಹತ್ತಿ ಬೆಳೆ, ಭೂಮಿಯನ್ನು ಹಸನ ಮಾಡಲಾಗದ ಪರಿಸ್ಥಿತಿಗೆ ಧಾರಾಕಾರವಾಗಿ ಸುರಿಯುವ ಮಳೆ ರೈತನ ಕಾಯಕಕ್ಕೆ ಅಡ್ಡಿಯಾಗಿದೆ.
ಪ್ರತಿ ವರ್ಷವೂ ಈ ಬೇಸಿಗೆ ಸಮಯಕ್ಕೆ ಭೂಮಿಯನ್ನು ಹರಗಿ, ಕಸ ಆರಿಸಿ, ಬೀಜ ಸಂಗ್ರಹಿಸಿ ಬಿತ್ತನೆಗೆ ತಯಾರಾಗುತ್ತಿದ್ದ ರೈತನಿಗೆ ಈ ವರ್ಷ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಿಲುಕಿ ರೈತರ ಭೂಮಿ ಸ್ವಚ್ಛತೆ ಕಾಯಕವೇ ತಟಸ್ಥವಾಗಿದೆ.
ಇನ್ನೂ ಕಳೆದ ವರ್ಷ ಮುಂಗಾರಿನಲ್ಲಿ ಹಾಕಿದ ಬಿಟಿ ಹತ್ತಿ ಜಮೀನು, ಹಿಂಗಾರು ಶೇಂಗಾ ಜಮೀನುಗಳ ಗಿಡಗಳು ಮಳೆಗೆ ಸಿಲುಕಿ ಪುನಃ ಹೂ ಕಾಯಿ ಬಿಡುತ್ತಿದ್ದು ಪ್ರಕೃತಿ ವೈಶಿಷ್ಟ್ಯವೇ ತಿಳಿಯದಾಗಿದೆ.
ಈಗಾಗಲೇ ಕುಂದಗೋಳ ತಾಲೂಕಿನಲ್ಲಿ ಶೇ.50% ಭೂಮಿ ಮುಂಚಿತವಾಗಿ ಹರಗಿ ಸ್ವಚ್ಚ ಮಾಡಿ ಬಿತ್ತನೆಗೆ ಸಜ್ಜಾದ್ರೇ ಶೇ.50% ಭೂಮಿ ಯಾವುದೇ ಚಟುವಟಿಕೆಗೆ ಒಳಗೊಳ್ಳದೆ ಹಾಗೇ ಇದೆ.
ಒಟ್ಟಾರೆ ವರುಣನ ಧಾರಾಕಾರ ಸುರಿತಕ್ಕೆ ಕೃಷಿಭೂಮಿ ಸಂಪೂರ್ಣ ತೇವಾಂಶ ಹೊಂದಿ ಜಮೀನನ ಕೃಷಿಹೊಂಡ ಸಹ ಭರ್ತಿಯಾಗಿವೆ, ವರುಣ ಇನ್ನಾದರೂ ಕೃಪೆ ತೋರಿ ರೈತಾಪಿ ಕೃಷಿ ಚಟುವಟಿಕೆ ಕೈಗೊಳ್ಳಲು ಅವಕಾಶ ನೀಡಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
07/05/2022 08:08 pm