ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸೇವಂತಿಗೆ ಹೂವು ಬೆಳೆಗಾರರಿಗೆ ಬೇಕಿದೆ ಸಹಾಯಹಸ್ತ

ಕಲಘಟಗಿ: ಕಣ್ಮನ ಸೆಳೆಯುವ ಹೂ ತೋಟ. ಸಾಲು ಸಾಲಿನಲ್ಲಿ ಬಂಗಾರದಂತೆ ಅರಳಿ ನಿಂತ ಸೇವಂತಿಗೆ ಹೂವು. ಈ ದೃಶ್ಯ ಕಂಡುಬಂದಿದ್ದು ಕಲಘಟಗಿ ತಾಲೂಕಿನ ಹಿರೆಹೋನ್ನಳ್ಳಿ ಗ್ರಾಮದಲ್ಲಿ.

ಕಲಘಟಗಿ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇವಂತಿಗೆ ಹೂವಿನ ಕೃಷಿಯಲ್ಲಿ ತೊಡಗಿದ್ದಾರೆ. ಕಲಘಟಗಿ ತಾಲೂಕಿನ ರೈತರು ಸೇವಂತಿಗೆ ಹೂವಿನ ಬೆಳೆಯನ್ನು ನೀರಾವರಿ ಬೆಳೆಯಾಗಿ ಹಬ್ಬ ಹರಿದಿನಗಳಲ್ಲಿ ಬೆಳೆಯುತ್ತಾರೆ. ಈ ತೋಟಗಾರಿಕಾ ಬೆಳೆಯಲ್ಲಿ ಪ್ರಮುಖ ಬೆಳೆ ಆಗಿದ್ದರೂ ಸಹ ರೈತರಿಗೆ ಸರಿಯಾದ ಸಲಹೆ ಸೂಚನೆ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ರೈತರಿಗೆ ಅಭಿವೃದ್ಧಿಯಲ್ಲಿ ಹೂವಿನ ಬೆಳೆ ಬೆಳೆಯಲು ಸರಿಯಾಗಿ ಮಾಹಿತಿ ಸಿಗುವುದಿಲ್ಲ ಹಾಗೂ ಸಸಿಗಳನ್ನು ನಾವು ಹೊರಗಡೆಯಿಂದ ತರಬೇಕು ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಸೇವಂತಿಗೆ ಹೂವಿನ ಕೃಷಿಯಲ್ಲಿ ತೊಡಗಿರುವ ರೈತರಿಗೆ ಸರ್ಕಾರದ ಸಬ್ಸಿಡಿ ಸೇರಿದಂತೆ ಇನ್ನಿತರ ಸಲಹೆ ಸೂಚನೆಗಳು ಸಿಗುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.

ಕಲಘಟಗಿ ತಾಲೂಕಿನ ಹಿರೆಹೋನ್ನಳ್ಳಿ, ದುಮ್ಮವಾಡ, ಜೋಡಳ್ಳಿ, ಮುತ್ತಗಿ ಸೇರಿದಂತೆ ವಿವಿಧ ಕಡೆಗಳಲ್ಲಿ ರೈತರು ಸೇವಂತಿಗೆ ಹೂವಿನ ಬೆಳೆಯನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ. ಇನ್ನಾದರೂ ಸಂಬಂಧಪಟ್ಟವರು ರೈತರ ಅಭಿವೃದ್ಧಿ ಕೃಷಿಗೆ ಕೈ ಜೋಡಿಸುವ ಕೆಲಸ ಮಾಡ್ತಾರಾ ಕಾಯ್ದು ನೋಡಬೇಕಾಗಿದೆ.

ವರದಿಗಾರ ವಿರೇಶ ಹಾರೊಗೇರಿ, ಪಬ್ಲಿಕ್ ನೆಕ್ಸ್ಟ್ ಕಲಘಟಗಿ.

Edited By : Manjunath H D
Kshetra Samachara

Kshetra Samachara

24/04/2022 10:27 pm

Cinque Terre

84.58 K

Cinque Terre

2

ಸಂಬಂಧಿತ ಸುದ್ದಿ