ನವಲಗುಂದ : ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್.ಆರ್ ಹಿರೇಮಠ ಅವರ ನೇತೃತ್ವದಲ್ಲಿ ಬಸವ ಕಲ್ಯಾಣದಿಂದ ಬೆಂಗಳೂರಿಗೆ ಹೊರಟಿರುವ ಜನಜಾಗೃತಿ ಜಾಥಾವನ್ನು ನವಲಗುಂದ ಮಹಾದಾಯಿ ಹೋರಾಟಗಾರರು ಸ್ವಾಗತಿಸಿ, ನಗರದ ರೈತ ಭವನದಲ್ಲಿ ಘೋಷಣೆ ಕೂಗಿದರು.
ಈ ವೇಳೆ ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್.ಆರ್ ಹಿರೇಮಠ ಮಾತನಾಡಿ, ರೈತರಿಗೆ ಮರಣ ಶಾಸನವಾಗಿದ್ದ ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರಕಾರ ಈಗಾಗಲೇ ರದ್ಧುಗೊಳಿಸಿದೆ. ಆದರೆ, ರಾಜ್ಯ ಸರಕಾರ ಮಾತ್ರ ಈ ಕರಾಳ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ರೈತ ಕುಲಕ್ಕೆ ಸವಾಲು ಹಾಕಿದೆ. ಈ ಸವಾಲನ್ನು ಎದುರಿಸಲು ನಾವು ಸಜ್ಜಾಗಿದ್ದು, ಈ ಕಾಯ್ದೆ ರದ್ದುಗೊಳ್ಳುವರೆಗೆ ಹೋರಾಟ ನಡೆಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಬಕ್ಕಾಯಿ, ಸುಭಾಷಚಂದ್ರಗೌಡ ಪಾಟೀಲ್, ಬಿ.ಎಫ್ ಸೊಪ್ಪಿನ್, ವೆಂಕನಗೌಡ್ರ್ ಪಾಟೀಲ್, ಹುಸೇನ್ ಖಾಜಿ, ಅಬಜಲ್ ಬಾವಿಕಟ್ಟಿ, ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ, ಮಲ್ಲೇಶ ಉಪ್ಪಾರ, ಸಂಗಪ್ಪ ನೀಡವಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Kshetra Samachara
08/03/2022 09:45 pm