ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಬೆಳೆ ಪರಿಹಾರ ಬಂದಿಲ್ವಾ ? ತಹಶೀಲ್ದಾರ ಎನ್ ಹೇಳ್ತಾರ ಕೇಳ್ರಿ !

ಕುಂದಗೋಳ: ಸರ್ಕಾರ ಮತ್ತ್ ಸಿಎಂ ಎಲ್ಲಾರಿಗೂ ಅತಿವೃಷ್ಟಿ ಪರಿಹಾರ ಕೊಡತೇವಿ ಅಂತ್ ಹೇಳ್ಯಾರ ಆಂದ್ರ ಯಾವಾಗ ಖಾತೆಗೆ ಹಣ ಬರತೈತಿ ಅಂತ್ ಹೇಳಿಲ್ಲ ನೋಡ್ರಿ, ಈ ಪರಿಣಾಮ ಹಳ್ಳಿ ರೈತರು ನಂದ್ ಪರಿಹಾರ ಬಂದಿಲ್ಲಾ, ನಿಂದ್ ಬಂದಿಲ್ಲಾ ಅವಂದ್ ಬಂದೈತಿ ಅಂತ್ಹೇಳಿ ಸೀದಾ ತಹಶಿಲ್ದಾರ ಭೇಟಿ ಆಗಿ ಪರಿಹಾರ ಕೇಳಕತ್ತಾರ್.

ರೀ ಈ ಸಾರಿ ಅತಿವೃಷ್ಟಿ ಕೊಟ್ಟ ಶಾಪ್ ಅಂತಾದ್ ಐತಿ, ರೈತರ ಬೆಳೆಗಳು ಸಂಪೂರ್ಣ ನಾಶ ಆಗಿ ರೈತರ ಕೈಯಲ್ಲಿ ಪುಡಿಗಾಸು ಇರದ ಸ್ಥಿತಿಗೆ ಸಿಲುಕಿ ಪಾಪಾ ಪರಿಹಾರ ಕೇಳಾಕಂತಾರ.

ಕುಂದಗೋಳ ಮತಕ್ಷೇತ್ರದ ಎಲ್ಲಾ ಹಳ್ಳಿ ಒಳಗೆ ಕೆಲ ರೈತರಿಗೆ ಪರಿಹಾರ ಬಂದ್ರೇ ಇನ್ನೂ ಕೆಲವರಿಗೆ ನಯಾ ಪೈಸೆ ಪರಿಹಾರ ಬಂದಿಲ್ಲಾ.

ಈ ವಿಚಾರವಾಗಿ ನಿತ್ಯವೂ ಬ್ಯಾಂಕ್ ಪಾಸ್ ಬುಕ್ ಚೆಕ್ ಮಾಡಿಸಿ ಮಾಡಿಸಿದ ರೈತರು ಪರಿಹಾರ ಜಮಾ ಆಗದೇ ಗ್ರಾಮ ಲೆಕ್ಕಾಧಿಕಾರಿ ಹಾಗೂ ತಹಶೀಲ್ದಾರರನ್ನು ಭೇಟಿ ಆಗುವವರ ಸಂಖ್ಯೆ ಹೆಚ್ಚಾಗಿದೆ.

ಈ ಬಗ್ಗೆ ರೈತರ ಮಾತಿಗೆ ಸ್ವತಃ ತಹಶೀಲ್ದಾರ ಪಬ್ಲಿಕ್ ನೆಕ್ಸ್ಟ್ ಮೂಲಕ ಏನು ಉತ್ತರ ಕೊಟ್ಟಾರ್ ಕೇಳ್ರಿ.

ಕುಂದಗೋಳ ತಾಲೂಕಿನ ಒಟ್ಟು 36123 ರೈತರ ಖಾತೆ ಪರಿಹಾರಕ್ಕೆ ದಾಖಲಾಗಿದ್ದು, ಅದರಲ್ಲಿ ಶೇ.40% ಅಧಿಕ ರೈತರಿಗೆ ಪರಿಹಾರ ಕೈ ಸೇರಿದೆ. ಇನ್ನೂ ರೈತರಿಗೆ ಹಂತ ಹಂತವಾಗಿ ಪರಿಹಾರ ಖಂಡಿತ ಜಮಾ ಆಗುತ್ತೇ ಎಂಬ ಉತ್ತರ ಕೊಟ್ಟಾರ್.

ಒಟ್ಟಾರೆ ಅತಿವೃಷ್ಟಿ ಕಷ್ಟಕ್ಕೆ ಸಿಲುಕಿದ ಅನ್ನದಾತರೇ ನಿಮ್ಮ ಪರಿಹಾರ ನಿಮಗೆ ಬರುತ್ತೇ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ನಿಮ್ಮ ಗ್ರಾಮ ಲೆಕ್ಕಾಧಿಕಾರಿ ಸಂಪರ್ಕ ಮಾಡಿ ಅವರು ಸರಿಯಾದ ಮಾಹಿತಿ ನೀಡದಿದ್ದರೇ ತಹಶೀಲ್ದಾರ ಈ ಮೊಬೈಲ್ ಸಂಖ್ಯೆಗೆ 6366014065 ಕರೆ ಮಾಡಿರಿ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

29/12/2021 05:08 pm

Cinque Terre

36.96 K

Cinque Terre

1

ಸಂಬಂಧಿತ ಸುದ್ದಿ