ಅಳ್ನಾವರ: ಕಳೆದ ವಾರ ಸುರಿದ ಅಕಾಲಿಕ ಮಳೆ ಅತಿವೃಷ್ಟಿ ಯ ಸರಾಮಾಲೆಯನ್ನೇ ಸುರಿಸಿದೆ.ರೈತಾಪಿ ವರ್ಗದ ಜನರ ಬದುಕಿಗೆ ಕೊಳ್ಳಿ ಇಟ್ಟು ಮೋಜು ನೋಡುವಂತೆ ಭಾಸವಾಗುತ್ತಿದೆ.ಸದ್ಯ ಮಳೆ ಏನು ಇಲ್ಲ,ಆದರೆ ಅದು ಮಾಡಿ ಹೋದ ಅನಾಹುತಕ್ಕೆ ರೈತರ ಬದುಕು ಬೀದಿಗೆ ಬಂದಿದೆ.ತುತ್ತು ಅನ್ನಕ್ಕಾಗಿ ರೈತ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.
ಇದಕ್ಕೆ ಅಳ್ನಾವರ ತಾಲೂಕೇನು ಹೊರತಲ್ಲ.ಇಲ್ಲಿನ ಪ್ರಮುಖ ಬೆಳೆಗಳಾದ ಗೋವಿನ ಜೋಳ,ಭತ್ತ,ಹತ್ತಿ ಕಬ್ಬು ಮಳೆಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ನೆಲ ಕಚ್ಚಿವೆ.ಕಟಾವು ಮಾಡಿದ ಭತ್ತ ನೀರಲ್ಲಿ ನಿಂತು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಗೋವಿನ ಜೋಳ ನಿಂತಲ್ಲೆ ಮೊಳಕೆಯೊಡೆದು ಮಾರಾಟ ವಾಗದಂತಾಗಿದೆ.ಹತ್ತಿ ಬೆಳೆ ಕೂಡ ಸಂಪೂರ್ಣ ನೆಲಸಮ ವಾಗಿದೆ.ಒಮ್ಮೆಯೂ ಕೂಡ ಹತ್ತಿಯನ್ನು ಬಿಡಸದೆ ಮಳೆಯ ಹೊಡೆತಕ್ಕೆ ಸಿಕ್ಕಿ ನಾಶವಾಗಿ ಹೋಗಿದೆ.
ಸರ್ಕಾರ ಒಂದು ಹೆಕ್ಟರ್ ಗೆ 6,800 ರೂ ಪರಿಹಾರ ಘೋಷಿಸಿದೆ.1 ಹೆಕ್ಟರ್ ಅಂದ್ರೆ ಎರಡೂವರೆ ಎಕರೆ.ಸರ್ಕಾರ ಕೊಡುತ್ತಿರುವ ಈ ಪರಿಹಾರ ದ ಮೊತ್ತ ಬೀಜ ಗೊಬ್ಬರಗಳಿಗೆ ಸಾಕಾಗುವುದಿಲ್ಲ.ಅದು ಇನ್ನು ಕೈಗೆ ಬಂದು ನಿಲುಕಲು ಎಷ್ಟು ದಿನಗಳು ಬೇಕೊ ಯಾರಿಗೆ ಗೊತ್ತು.ದೇಶಕ್ಕೆ ಅನ್ನ ಹಾಕೋ ರೈತನೆ ಇನ್ನೊಬ್ಬರಿ ಕೈ ಚಾಚುವಂತಾ ಪರಿಸ್ಥಿತಿ ನಿರ್ಮಾಣ ವಾಗಿರೋದು ನಿಜಕ್ಕೂ ಬೇಸರದ ಸಂಗತಿ.
ಮಹಾಂತೇಶ ಪಠಾಣಿ
ಪಬ್ಲಿಕ್ ನೆಕ್ಸ್ಟ್
ಅಳ್ನಾವರ
Kshetra Samachara
26/11/2021 11:27 am