ಕುಂದಗೋಳ: ರೈತರ ವಾಣಿಜ್ಯ ಬೆಳೆ ಮೆಣಸಿನಕಾಯಿ ಬೆಳೆ ಬೆಳೆಯುವುದರಲ್ಲೇ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹೆಸರು ಕಂಡಿದ್ದ ಕುಂದಗೋಳ ತಾಲೂಕಿನ ರೈತರಿಗೆ ಈಗ ಮೆಣಸಿನಕಾಯಿ ಬರ ಬಂದಿದೆ.
ಬ್ಯಾಡಗಿ, ಡಬ್ಬಿ, ಕಡ್ಡಿ, ದೇವನೂರು ಕಡ್ಡಿ ಹೀಗೆ ನಾನಾ ವಿಧದ ಮೆಣಸಿನಕಾಯಿ ಬೆಳೆ ಬೆಳೆದು ಬ್ಯಾಡಗಿ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕುಂದಗೋಳ ತಾಲೂಕಿನಲ್ಲೇ 4300 ಹೇಕ್ಟರ್ ಮೆಣಸಿನಕಾಯಿ ಬೆಳೆ ಈ ಬಾರಿ ವರುಣನ ಆಘಾತಕ್ಕೆ ಅಕ್ಷರಶಃ ನಶಿಸಿ ಹೋಗಿ ಮೆಣಸಿನಕಾಯಿ ಜಮೀನು ನೋಡಿದ್ರೆ ಸಾಕು ರೈತರ ಕರುಳು ಕಿತ್ತು ಬರುತ್ತಿದೆ.
ವರ್ಷದ ಆರಂಭದಲ್ಲಿ ಉತ್ತಮ ಫಸಲಿನ ನಿರೀಕ್ಷೆ ಜೊತೆ ಆದಾಯದ ಭರವಸೆ ಮೂಡಿಸಿದ್ದ ಮೆಣಸಿನ ಬೆಳೆ ಅಕಾಲಿಕ ಮಳೆಗೆ ಸಿಲುಕಿ ಸಂಪೂರ್ಣ ಹೊಲ ನಾಶವಾಗಿ ಗಿಡದಲ್ಲಿನ ಕಾಯಿಗಳು ಸುಟ್ಟಂತೆ ಗೋಚರಿಸುತ್ತಿದ್ದು ಹೊಲದಲ್ಲಿ ಸಂಗ್ರಹವಾದ ನೀರು ಇಂದಿಗೂ ಕಡಿಮೆಯಾಗದೆ ರೈತರಿಗೆ ಉತ್ತಮ ಬೆಳೆ ಬರುತ್ತೆ ಎಂಬ ನಂಬಿಕೆ ಕೈ ತಪ್ಪಿ ಹೋಗಿದೆ.
ಅದರಲ್ಲೂ ಅದೆಷ್ಟೋ ರೈತರು ಆರಂಭದಲ್ಲಿ ಮೆಣಸಿನಕಾಯಿ ಬೆಳೆ ನೋಡಿ ಬೆಳೆ ವಿಮೆ ಸಹ ತುಂಬದೆ ಕೈ ಬಿಟ್ಟಿದ್ದು, ಈಗ ಅಕಾಲಿಕ ಮಳೆ ರೈತರು ಬೆಳೆಯನ್ನು ನಾಶ ಮಾಡಿದ್ದು ಬೆಳೆ ವಿಮೆ ತುಂಬದೆ ಇರೋ ರೈತರಿಗೂ ಪರಿಹಾರ ಸಿಗುತ್ತಾ ? ಎಂಬ ಸಂಶಯ ದಟ್ಟವಾಗಿದೆ.
ಒಟ್ಟಾರೆ ರೈತರು ಅಭಿಪ್ರಾಯದ ಪ್ರಕಾರ ಕೃಷಿ ಅಧಿಕಾರಿಗಳ ಸರ್ವೇ 4300 ಹೇಕ್ಟರ್'ಗಿಂತ ಅಧಿಕ ಮೆಣಸಿನಕಾಯಿ ಬೆಳೆದ ಕೃಷಿ ಭೂಮಿ ಬರಡಾಗಿ ಹೋಗಿದ್ದು, ಈ ಬಾರಿ ಮೆಣಸಿನಕಾಯಿ ಮತ್ತಷ್ಟೂ ತುಟ್ಟಿಯಾಗಲಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
25/11/2021 01:38 pm