ಕುಂದಗೋಳ : ಇಷ್ಟು ದಿನಗಳ ಕಾಲ ಎಡಬಿಡದೆ ಸುರಿದ ಮಳೆರಾಯ ಕಳೆದ ಒಂದೂರೆಡು ದಿನ ತುಸು ಬಿಸಿಲಿನ ಮೋರೆ ತೋರಿದ್ದನ್ನ ಗಮನಿಸಿದ ರೈತರು ತಮ್ಮ ಜಮೀನುಗಳಲ್ಲಿ ಶೇಂಗಾ ಕಿತ್ತು ಹಾಕಿದ್ದಾರೆ ಆದರೆ ನಿನ್ನೆ ರಾತ್ರಿಯಿಂದ ಇಂದು ಮಧ್ಯಾಹ್ನವಾದ್ರೂ ಮತ್ತೆ ವರುಣ ಅಟ್ಟಹಾಸ ಮುಂದುವರೆಸಿದ್ದು ಹೊಲದಲ್ಲಿದ್ದ ಶೇಂಗಾ ಬೆಳೆ ಅಕ್ಷರಷಃ ಹಾಳಾಗಿ ನೀರಿನಲ್ಲಿ ಮುಳುಗಿ ಹೋಗಿದೆ ಮತ್ತೆ ಸುರಿಯುವ ಮಳೆಯಲ್ಲೇ ರೈತರು ಬೆಳೆಗಳನ್ನ ಉಳಿಸಿಕೊಳ್ಳಲು ನೀರು ಬಿಟ್ಟು ಬೇರೆಡೆಗೆ ಕಿತ್ತು ಹಾಕುತ್ತಿದ್ದಾರೆ.
ತಾಲೂಕಿನ ಬೆನಕನಹಳ್ಳಿಯ ಪ್ರವೀಣ ಪಾಟೀಲ ಎಂಬುವವರು ನಿನ್ನೆ ಕಿತ್ತು ಹಾಕಿದ್ದ ಶೇಂಗಾ ಬೆಳೆಗಳು ಸಂಪೂರ್ಣ ಜಲಾವೃತವಾಗಿದ್ದು ಮೊಣಕಾಲುದ್ದ ನೀರಲ್ಲಿ ಕಾಲಾಡಿಸುತ್ತ ಶೇಂಗಾ ಬೆಳೆಗಳನ್ನು ತೆಗೆದು ಬೇರೆಡೆ ಹಾಕುತ್ತಿದ್ದು ಹತ್ತಿ ಬೆಳೆಯಲ್ಲೂ ನೀರು ನಿಂತಿದೆ.
ಒಟ್ಟಾರೆ ಮಳೆಗಾಲ ಹೋಗಿ ರೈತನ ಬದುಕಿಗೆ ಕೇಡುಗಾಲವಾಗಿ ಕಾಡುತ್ತಿದ್ದು ಕಷ್ಟ ಪಟ್ಟು ಬೆಳೆದ ಬೆಳೆಯನ್ನ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
Kshetra Samachara
26/09/2020 01:11 pm