ಕುಂದಗೋಳ : ಅತಿವೃಷ್ಟಿ ಪರಿಣಾಮ ಈಗಾಗಲೇ ಮುಂಗಾರು ಬೆಳೆ ಬೆಳೆದು ಇತ್ತ ಕೈಯಿಂದ ಹಾಕಿದ ಬಂಡವಾಳವು ಕೈಗೆ ಸೇರುವುದಿಲ್ಲ ಎಂಬುದನ್ನು ಅರಿತ ರೈತ ತಾನೇ ಆರು ತಿಂಗಳು ಪರಿಶ್ರಮ ಪಟ್ಟು ಬೆಳೆದ ಬೆಳೆಗಳನ್ನು ತನ್ನ ಕೈಯಾರವೇ ಟ್ರ್ಯಾಕ್ಟರ್ ಕುಂಟಿ ಕುಡಕ್ಕೆ ಆಹುತಿ ಮಾಡುತ್ತಿದ್ದಾನೆ.
ಈ ಪರಿಣಾಮ ಈಗಾಗಲೇ ಮುಂಗಾರು ಬೆಳೆ ಸಮೀಕ್ಷೆ ಮಾಡಿಸಿದ ರೈತರು ಹಿಂಗಾರು ಬೆಳೆಗೆ ಜಿಪಿಎಸ್ ಸಮಸ್ಯೆಗೆ ತುತ್ತಾಗುವ ಸಮಸ್ಯೆ ಒಂದೇಡೆಯಾದರೆ ಹಿಂಗಾರು ಲಾಭ ಕೊಡುವ ನಿರೀಕ್ಷೆಗಳು ಎದ್ದು ತೋರುತ್ತಿವೆ. ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಹಿರೇಹರಕುಣಿ, ಕಡಪಟ್ಟಿ, ನಾರಾಯಣಪುರ, ಮುಳ್ಳೋಳ್ಳಿ, ಬೆನಕನಹಳ್ಳಿ ಸೇರಿದಂತೆ ಅನೇಕ ಹಳ್ಳಿಗರು ಈ ಕ್ರಮಕ್ಕೆ ಮುಂದಾಗಿದ್ದು ಹಿಂಗಾರಿನ ಲಾಭದ ನಿರೀಕ್ಷೆ ಹೊಂದಿದ್ದಾರೆ.
ಮಾರುಕಟ್ಟೆಯಲ್ಲಿ ಜಬರದಸ್ತ್ ಬೆಲೆಯಲ್ಲಿರುವ ಹಾಗೂ ಬೆಳೆ ಬೆಳೆಯುವ ನಿರ್ವಹಣೆ ವೆಚ್ಚ ಕಡಿಮೆ ಇರುವ ಗೋಧಿ, ಕುಸುಬೆ, ಕಡಲೆ, ಜೋಳ ಹಿಂಗಾರು ಬೆಳೆಗಳು ಈ ಸಾರಿ ಅತಿವೃಷ್ಟಿ ಪರಿಣಾಮ ಭೂಮಿಯು ಸಂಪೂರ್ಣ ಹಸಿಯಾಗಿದ್ದು ಅತಿ ಉತ್ತಮ ಉಳುವರಿ ಪಡೆಯುವ ಲಕ್ಷಣಗಳನ್ನು ಕಂಡ ರೈತರು ಹತ್ತಿ, ಮೆಣಸಿನ ಗಿಡದ ಹೊಲದ ಬೆಳೆಗಳನ್ನು ಹರಗಿ ಹಿಂಗಾರು ಬಿತ್ತುವ ಕಾಯಕ್ಕೆ ಅಣಿಯಾಗಿದ್ದಾರೆ.
Kshetra Samachara
31/10/2020 01:34 pm