ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಮಳೆ ಆದರೂ ಒಂದು ಸಂಕಟ.. ಬಿಟ್ಟರೂ ಒಂದು ಸಂಕಟ.. ಏನೇ ಆದರೂ ನಷ್ಟ ಅನುಭವಿಸೋದು ರೈತ ಮಾತ್ರ.
ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಕಟಾವಿಗೆ ಬರಬೇಕಿದ್ದ ಆಲೂಗಡ್ಡೆ ಅದೇ ಜಮೀನಿನಲ್ಲಿ ಕೊಳೆಯುವಂತಾಗಿದೆ. ನಿರಂತರ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಧಾರವಾಡ ಜಿಲ್ಲೆಯ ಆಲೂಗಡ್ಡೆ ಬೆಳೆ ರಾಜ್ಯ ಹಾಗೂ ಅಂತರ ರಾಜ್ಯಗಳಿಗೂ ರಫ್ತಾಗುತ್ತಿತ್ತು. ಈ ಆಲೂಗಡ್ಡೆ ಬೆಳೆ ಕೂಡ ರೈತರಿಗೆ ಉತ್ತಮ ಆದಾಯ ತಂದು ಕೊಡುತ್ತಿತ್ತು. ಆದರೆ, ನಿರಂತರ ಮಳೆಯಿಂದಾಗಿ ಸೊಂಪಾಗಿ ಬೆಳೆದು ನಿಂತು ದೊಡ್ಡ ದೊಡ್ಡ ಗಡ್ಡೆಯನ್ನೂ ಬಿಟ್ಟಿದ್ದ ಆಲೂಗಡ್ಡೆ ಬೆಳೆ ಇದೀಗ ಕೊಳೆತು ಕೆಟ್ಟ ವಾಸನೆ ಬರತೊಡಗಿದೆ.
Kshetra Samachara
17/10/2020 11:11 am