ಕಲಘಟಗಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ತಂಬೂರ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾರ್ಯಾಚರಣೆ ವೇಳೆ ಆನೆಗಳು ದಿಢೀರನೆ ದಾಳಿ ಮಾಡಿದ ಘಟನೆ ನಡೆದಿದೆ.
ಹೌದು..ಹಲವಾರು ದಿನಗಳಿಂದ 8 ಆನೆಗಳ ಹಿಂಡು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಆಲದಕಟ್ಟಿ, ತಂಬೂರ, ಸಂಗಮೇಶ್ವರ ಡಿಂಬವಳ್ಳಿ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಬಿಡು ಬಿಟ್ಟಿದ್ದ ಆನೆಗಳನ್ನು ಅರಣ್ಯ ಅಧಿಕಾರಿಗಳು ನಿರಂತರ ಕಾಡಿಗೆ ಅಟ್ಟಲ್ಲೂ ಕಾರ್ಯಚರಣೆ ಮಾಡುತ್ತಿದ್ದ ವೇಳೆ ಅಧಿಕಾರಿಗಳ ಮೇಲೆ ದಾಳಿ ನಡೆಸಿವೆ.
ಬಮ್ಮಿಗಟ್ಟಿ ವಲಯದ ಅಧಿಕಾರಿ ಉಮ್ಮೆಶ ಕಡಿ, ಮೌನೇಶ ಲಿಂಗನಶೆಟ್ಟಿಕೊಪ್ಪ, ಸುರೇಶ ಅರವಳ್ಳಿ, ಪರಶುರಾಮ, ಕೃಷ್ಣ ಪಮ್ಮಾರ ಅವರಿಗೆ ಆನೆಯು ಕ್ವಾರಿಯಿಂದ ದಾಳಿ ಮಾಡಿದ್ದರಿಂದ ಗಾಯಗೊಂಡಿದ್ದಾರೆ. ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಎಲ್ಲ ಸಿಬ್ಬಂದಿಗಳನ್ನು ಸ್ಥಳೀಯ ಸರ್ಕಾರಿ ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Kshetra Samachara
19/12/2021 09:23 pm