ಹುಬ್ಬಳ್ಳಿ : ಇಂದು ವಿಶ್ವ ಪರಿಸರ ದಿನದ ಅಂಗವಾಗಿ, ವಿದ್ಯಾನಗರದಲ್ಲಿರುವ ಜೆ.ಜಿ ಕಾಮರ್ಸ್ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಸಸಿ ನೀಡುವ ಮೂಲಕ ಅರ್ಥಪೂರ್ಣವಾಗಿ ಪರಿಸರ ದಿನಾಚರಣೆ ಆಚರಿಸಿದರು.
ಇನ್ನು ಸಾರ್ವಜನಿಕರಿಗೆ ಸಸಿ ನೀಡಿದ ವಿದ್ಯಾರ್ಥಿಗಳು, ಒಂದು ಸಸಿ ನೆಟ್ಟರೆ ಸಾವಿರಾರು ಜನರಿಗೆ ಉಸಿರು ನೀಡುತ್ತದೆ ಎಂಬ ಪರಿಕಲ್ಪನೆ ಇಟ್ಟುಕೊಂಡು, ಎಲ್ಲರೂ ಸಸಿ ನೆಟ್ಟು ಪರಿಸರ ಉಳಿಸಿ, ಬೆಳೆಸೋಣ ಎಂಬ ಸಂದೇಶದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಜಾಗೃತಿಯನ್ನು ಸಾರ್ವಜನಿಕರಿಗೆ ಮೂಡಿಸಲಾಗುತ್ತಿದೆ.
ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲರೂ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತೇವೆ ಎಂದಿದ್ದಾರೆ ಎಂದರು.
Kshetra Samachara
05/06/2023 04:41 pm