ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ನೇಸರನ ಆಗಮನದ ಬೆಳಕಿನ ತುಂಟಾಟ ರಮಣೀಯ ಈ ಪ್ರಕೃತಿಯ ನೋಟ

ಕಲಘಟಗಿ : ಎರಾ ಏರಿ ಅಂಬರದಾಗೇ ನೇಸರ ನಗತಾನೇ ಮರಗಿಡ ಕೂಗ್ಯಾವೇ ಹಕ್ಕಿ ಹಾಡ್ಯಾವೆ ಈ ಹಾಡನ್ನು ಕೇಳಿದ್ರೇ ಕವಿ ಈ ಪ್ರಕೃತಿಯ ಸೌಂದರ್ಯವನ್ನು ಅದೇಷ್ಟೂ ಸುಂದರವಾಗಿ ಅನುಭವಿಸಿ ಬರೆದಿರ ಬೇಕಲ್ವೇ.

ಈ ತರಹದ ಹಾಡು, ನೇಸರ, ಪ್ರಕೃತಿ ಮಡಿಲಿನಿಂದ ನಾವು ನೀವೆಲ್ಲಾ ಆಧುನಿಕ ಜೀವನ ಶೈಲಿಗೆ ಸಿಲುಕಿ ದೂರಾಗಿದ್ದೆವೆ ನೋಡಿ ದಿನ ಬೆಳಗಾದ್ರೇ ಕೆಲ್ಸಾ, ಮಕ್ಕಳು, ಆಫೀಸ್, ವ್ಯಾಪಾರ, ಹೆಚ್ಚಾಗಿ ಈ ಕೊರೊನಾ ಗದ್ದಲ ನಾವೆಲ್ಲ ಮರೆತಿರೋ ಈ ಬೆಳಗಿನ ಪ್ರಕೃತಿಯ ಸವಿಯನ್ನ ಇಲ್ಲೊಬ್ಬ ಹವ್ಯಾಸಿ ಛಾಯಾಗ್ರಾಹಕ ತನ್ನ ಕ್ಯಾಮಾರಾ ಕಣ್ಣಲ್ಲಿ ಸೆರೆ ಹಿಡಿದು ನಮಗೆ ನೀಡಿದ್ದಾನೆ.

ಹೌದು ! ನೀವಿಲ್ಲಿ ನೋಡುತ್ತಿರುವ ಚಿತ್ರ ಸಂಜೇ ತೆಗೆದ ಚಿತ್ರಗಳಲ್ಲ ಬದಲಾಗಿ ಇರುಳೊಂದು ಕಳೆದು ಬೆಳಗನ್ನು ಚಾಚುವ ಸಮಯದಲ್ಲಿ ಅಂದ್ರೇ ನಸುಕಿನ ಜಾವದಲ್ಲಿ ಮಿಶ್ರಿಕೋಟಿ ಗ್ರಾಮದ ಈರಪ್ಪ ನಾಯ್ಕರ್ ಎಂಬಾತ ಈ ಮನಮೋಹಕ ಚಿಲಿಪಿಲಿ ರಾಗ, ಸೂರ್ಯ ಭೂವಿಗೆ ಬೆಳಕು ತರುವ ಸಮಯ, ಮೋಡದ ಓಟ, ಮರ ಗಿಡ ಎಲೆಗಳ ಕಣ್ ತೆರೆಯುವ ಸಮಯದಲ್ಲಿ ಸೆರೆ ಹಿಡಿದ ಮನಮೋಹಕ ಚಿತ್ರಗಳ ಈ ಜಲಕ್ ನಿಮಗೂ ಇಷ್ಟವಾಗದಿರಲು ಸಾಧ್ಯವಿಲ್ಲ ಬಿಡಿ.

ಅಂದಹಾಗೇ ನಿಮಗೆ ಈ ಪೋಟೋ ಒಳಗೆ ಗೋಚರಿಸುವ ಎಲ್ಲಾ ಹಕ್ಕಿಗಳು ಒಂದೇ ಅಲ್ಲಾ ಅದರಲ್ಲಿ ಕಾಚಾಣ, ಬುಲ್ ಬುಲ್, ರಾಟವಾಳ, ಕಳ್ಳಿ ಪೀರಾ, ಡೇಲಿ ಚಟಕಾ, ಪಾಟ್ ಬಿಲಕ್, ಕಿರು ಬೆಳ್ಳಕ್ಕಿ ಸೇರಿದಂತೆ ಜಾತಕ ಪಕ್ಷಿಗಳನ್ನ ಕ್ಯಾಮಾರಾ ಕಣ್ಣಲ್ಲಿ ಸಿಕ್ಕಿವೆ.

Edited By : Nagesh Gaonkar
Kshetra Samachara

Kshetra Samachara

04/11/2020 08:44 am

Cinque Terre

34.97 K

Cinque Terre

9

ಸಂಬಂಧಿತ ಸುದ್ದಿ