ಹುಬ್ಬಳ್ಳಿ: ಇಂದು ವಾಣಿಜ್ಯನಗರಿಯಲ್ಲಿ ಸುರಿದ ಮಳೆಯಿಂದಾಗಿ ಸುಮಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನೀರು ಹೋರ ಹಾಕಲು ಕುಟುಂಬಸ್ಥರು ಹರಸಾಹಸ ಪಡುವಂತಾಗಿದೆ.
ಸಣ್ಣ ಮಳೆಯಾದರೆ ಸಾಕು ನಗರದ ಚನ್ನಪೇಟಯ ಓಣಿಯಲ್ಲಿರುವ ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ. ಇನ್ನೂ ಮಳೆಯಿಂದಾಗಿ ನೀರು ಮನೆಗೆ ನುಗ್ಗಿದ್ದಕ್ಕೆ ನೀರು ಹೊರಗೆ ಹಾಕುವುದೇ ಇಲ್ಲಿನ ನಿವಾಸಿಗಳಿಗೆ ಒಂದು ಕಾಯಕವಾಗಿದೆ.ಪ್ರತಿ ಸಾರಿ ಮಳೆಯಾದಾಗ ಇದೇ ಪರಿಸ್ಥಿತಿಯನ್ನು ಇಲ್ಲಿನ ಜನ ಎದುರಿಸುತ್ತಿದ್ದರು. ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಅದೆಷ್ಟೋ ಬಾರಿ ತಿಳಿಸಿದರು ಯಾವುದೇ ಪ್ರಯೋಜನ ಆಗಿತ್ತಿಲ್ಲ ಎಂದು ನಿವಾಸಿಗಳು ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
20/10/2020 09:09 pm