ಧಾರವಾಡ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿರುವ ಬೃಹತ್ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಕೆರೆ ಕಟ್ಟೆ ಒಡೆಯುವ ಹಂತ ತಲುಪಿದೆ.
ಹೌದು! ನಿಗದಿ ಗ್ರಾಮದಲ್ಲಿ ಸುಮಾರು 25 ರಿಂದ 30 ಎಕರೆ ಪ್ರದೇಶದಲ್ಲಿರುವ ಈ ಕೆರೆಯ ಕಟ್ಟೆ ಬಿರುಕು ಬಿಟ್ಟಿದೆ. ಈಗಾಗಲೇ ಈ ಕೆರೆ ಮಳೆಯಿಂದ ಭರ್ತಿಯಾಗಿದ್ದು, ಕೆರೆಯ ಕಟ್ಟೆ ಯಾವಾಗ ಒಡೆಯುತ್ತದೆಯೋ ಎಂಬ ಭಯದ ವಾತಾವರಣದ ಮಧ್ಯೆ ಈ ಗ್ರಾಮದ ರೈತರು ಬದುಕುವಂತಾಗಿದೆ.
ಒಂದು ವೇಳೆ ಈ ಕೆರೆಯ ಕಟ್ಟೆ ಒಡೆದಿದ್ದೇ ಆದಲ್ಲಿ ಅದರ ಅಕ್ಕಪಕ್ಕದಲ್ಲಿರುವ ಹೊಲ ಗದ್ದೆಗಳು ಜಲಾವೃತಗೊಂಡು ಬೆಳೆ ನಾಶವಾಗಲಿದೆ. ಈ ಕೆರೆಯ ನೀರು ಹೊಲಗಳಿಗೆ ನುಗ್ಗಿ ಸುಮಾರು 100 ಎಕರೆ ಪ್ರದೇಶದಲ್ಲಿರುವ ಕಬ್ಬು ಹಾಗೂ ಭತ್ತ ನಾಶವಾಗಬಹುದು ಎಂದು ಗ್ರಾಮದ ವಿಠ್ಠಲ ಶಿಗನಳ್ಳಿ ಆತಂಕ ವ್ಯಕ್ತಪಡಿಸಿದರು.
Kshetra Samachara
14/10/2020 07:44 pm