ಧಾರವಾಡ: ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನವಲಗುಂದ ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದ 10ಕ್ಕೂ ಹೆಚ್ಚು ಮನೆಗಳು ಕುಸಿದಿವೆ.
ಸತತ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಚಿಕ್ಕಮಠದ ಗೋಡೆ ಕುಸಿದಿದೆ.ಇನ್ನೊಂದೆಡೆ ಬೃಹತ್ ಗೋಡೆ ಎತ್ತಿನ ಮೇಲೆ ಕುಸಿದಿದ್ದು,ಎತ್ತಿನ ಕೋಡು ಮುರಿದು ಹೋದ ಘಟನೆ ನಡೆದಿದೆ.
ಕಬ್ಬೇನೂರು ಗ್ರಾಮದಲ್ಲಿ ಮಳೆಗೆ ಕುಟುಂಬಸ್ಥರು ರಾತ್ರಿ ಮಲಗಿದ್ದಾಗ, ಚೆನ್ನಬಸಪ್ಪ ಶಿಂತ್ರಿ ಮತ್ತು ಶಿವನಗೌಡ ವೆಂಕನಗೌಡ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ.
ಅದೃಷ್ಟವಶಾತ್ ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಣಭೀಕರ ಮಳೆಗೆ ಅನೇಕ ಮನೆಗಳು ಜಖಂಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು,ಭಾರೀ ಮಳೆಗೆ ಜನಜೀವನ ತತ್ತರಿಸಿದೆ.
Kshetra Samachara
13/10/2020 10:48 pm