ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿದ್ಯಾಕಾಶಿಯಲ್ಲಿ ನಿರಂತರ ಮಳೆಗೆ ತಂಪಾಯಿತು ಇಳೆ

ಧಾರವಾಡ: ನಗರದಾದ್ಯಂತ ಜಿಟಿ ಜಿಟಿಯಾಗಿ ಸುರಿಯುತ್ತಿರುವ ಮಳೆ ಇಂದು ಮಧ್ಯಾಹ್ನ ಬಿಟ್ಟು ಬಿಡದೇ ಸುರಿದು ನಗರ ತಂಪಾಗಿಸಿದೆ.

ಕಳೆದ ಎರಡು ದಿನಗಳಿಂದ ಬಿಡುವು ನೀಡಿದ ಮಳೆ ಇಂದು ಮಧ್ಯಾಹ್ನ ಏಕಾಏಕಿ ಸುರಿಯಲಾರಂಭಿಸಿತು. ಇದರಿಂದಾಗಿ ಮಾರುಕಟ್ಟೆ ಹಾಗೂ ಇತರೆ ಸ್ಥಳಗಳಲ್ಲಿ ಬಂದ ಜನರು ಪರದಾಡುವಂತಾಯಿತು. ಬಿಸಿಲಿನಿಂದ ಕಂಗೆಟ್ಟಿದ್ದ ಭೂಮಿಗೆ ತಂಪರೆದ ಮಳೆರಾಯನ ಅಬ್ಬರ ಜೋರಾಗಿದೆ.

ವರುಣನ ಆರ್ಭಟದೊಂದಿಗೆ ಏಕಾಏಕಿ ಮಳೆಯಿಂದ ಧಾರವಾಡ ಜನತೆಯ ಮೊಗದಲ್ಲಿ ನಗು ಮೂಡಿದೆ. ಸತತ ಎರಡು ಗಂಟೆ ಕಾಲ ನಗರದ ಹಲವೆಡೆ ಸುರಿದ ಮಳೆ ಬಿಸಿಲಿಗೆ ನಲುಗಿ ಹೋಗಿದ್ದ ಸಾಂಸ್ಕೃತಿಕ ನಗರಿಯನ್ನು ತಂಪುಗೊಳಿಸಿದೆ.

Edited By :
Kshetra Samachara

Kshetra Samachara

09/10/2020 03:52 pm

Cinque Terre

10.84 K

Cinque Terre

0

ಸಂಬಂಧಿತ ಸುದ್ದಿ