ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಕಡಕ್ ಪೊಲೀಸಪ್ಪನ ಕಂಠ ಸಿರಿಯಲ್ಲಿ ಕೊಳಲು ನಾದ

ಅಳ್ನಾವರ: ಪೊಲೀಸರೆಂದರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ. ತಪ್ಪು ಮಾಡಿದವರಿಗೆ,ಹೀನ ಕೃತ್ಯ ಎಸಗುವವರಿಗೆ ಪೊಲೀಸರೆಂದರೆ ಪ್ಯಾಂಟು ಒದ್ದೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾನೂನಿನ ಪರಿಪಾಲಕರ ಕೈಯಲ್ಲಿ ಲಾಠಿ ಕಂಡರಂತೂ ಎದೆಯಲ್ಲಿ ಕಂಪನ ಶುರುವಾಗುತ್ತೆ. ಅಂದ್ರೆ ಲಾಠಿ ಕೇವಲ ಬೆವರಿಳಿಸಲು ಅಷ್ಟೇ ನಾ...! ಇಲ್ಲಾ ಲಾಠಿಯಿಂದ ಗಾನ ಗಂಗೆ ಹರಿಸುವುದನ್ನ ನಾವು ನಿಮಗೆ ತೋರಸ್ತಿವಿ ನೋಡಿ.

ಇವರ ಹೆಸರು ಚಂದ್ರಕಾಂತ ಹುಟಗಿ ಅಂತಾ. ಸದ್ಯ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಅದ್ಭುತ ಕಲಾವಿದ. ಕೊಳಲು ನುಡಿಸುವುದರಲ್ಲಿ ಎತ್ತಿದ ಕೈ. ಪೊಲೀಸ್ ಕೆಲಸದ ಬಿಡುವಿನ ವೇಳೆ ಕೊಳಲಿನಿಂದ ಸ್ವರ ಮಾಧುರ್ಯವನ್ನ ಹೊರ ಹಾಕೋ ಅದ್ಭುತ ಕಲಾವಿದ.

ಇವರೇನು ವೃತ್ತಿಪರ ಕೊಳಲು ವಾದಕವೇನಲ್ಲ. ಹವ್ಯಾಸವಾಗಿ ಕೊಳಲು ನುಡಿಸುವುದನ್ನ ಸ್ವತಹ ತಾವೇ ಖುದ್ದಾಗಿ ಕಲಿತುಕೊಂಡಿದ್ದು, ಸುಮಾರು 38 ವರ್ಷಗಳಿಂದ ನಿರಂತರವಾಗಿ ಕೊಳಲು ನುಡಿಸುತ್ತಿದ್ದಾರೆ. ಇದರ ಜೊತೆಗೆ ತಬಲಾ, ಮೌತ್ ಆರ್ಗನ್, ಹಾರ್ಮೋನಿಯಂ ಸಹ ಇವರಿಗೆ ಗೊತ್ತು. ಇಷ್ಟೇ ಅಲ್ಲದೆ ನಾಟಕಗಳನ್ನು ಸಹ ನಿರ್ದೇಶನ ಮಾಡಿ ಟಿ,ಎಸ್ ನಾಗಾಭರಣ ಅವರ ಕಡೆಯಿಂದ ಸೈ ಎನಿಸಿಕೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕರ್ತವ್ಯಕ್ಕೆ ಎಂದು,ಎಲ್ಲೂ ಚ್ಯುತಿ ಬಾರದಂತೆ ನಡೆದುಕೊಂಡು ಬಿಡುವಿನ ಸಮಯದಲ್ಲಿ ಕೊಳಲು ನುಡಿಸುವುದರ ಜೊತೆಗೆ ಜೊತೆಯಲ್ಲಿದ್ದವರಿಗೆ ಕೊಳಲಿನಿಂದ ಮನರಂಜನೆಯ ರಸದೌತಣ ಉಣಬಡಿಸುತ್ತಾರೆ.ಹೊರಗಡೆ ಖದರ್ ಕಡಕ್ ಪೊಲೀಸ್ ಆಫೀಸರ್ ಆದ್ರೂ ಆಂತರಿಕವಾಗಿ ಒಬ್ಬ ಮೃದು ಮನಸ್ಸಿನ ಕಲಾವಿದ ಸದಾ ಇವರೊಳಗಿದ್ದಾನೆ.ಮೇಲಿನ ಅಧಿಕಾರಿಗಳಿಂದ ಶಹಬ್ಬಾಶ ಎನಿಸಿಕೊಳ್ಳುವುದಲ್ಲದೆ, ಸಾವರ್ಜನಿಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವರ ಈ ಕಲೇ ಎಂದು ಮರೆಮಾಚದೆ ನಿರಂತರವಾಗಿ ಸಾಗಲಿ ಎಂಬುದು ನಮ್ಮ ಆಶಯ.

ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್ ಅಳ್ನಾವರ

Edited By : Somashekar
Kshetra Samachara

Kshetra Samachara

02/10/2022 06:49 pm

Cinque Terre

28.29 K

Cinque Terre

5