ನವಲಗುಂದ : ನಗರದ ಗಾಂಧಿ ಮಾರುಕಟ್ಟೆಯಲ್ಲಿ ಗುರುವಾರ ರಾತ್ರಿ ಯುವ ಪುತ್ರ ಹನುಮಾನ್ ದೇಹ ದಾರ್ಡ್ಯ ಪ್ರದರ್ಶನವನ್ನು ಸಾಯಿ ಜಿಮ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಸ್ಪರ್ಧಿಗಳು ತಮ್ನ ಕಟ್ಟುಮಸ್ತಾದ ದೇಹವನ್ನು ಪ್ರದರ್ಶನ ಮಾಡಿ, ನೋಡುಗರ ಹುಬ್ಬೆರಿಸುವಂತೆ ಮಾಡಿದರು.
ಇನ್ನು ಪ್ರದರ್ಶನದಲ್ಲಿ 55 ರಿಂದ 75 ಕೆಜಿ ವಿಭಾಗದ ಪ್ರದರ್ಶನದಲ್ಲಿ 35 ಕ್ಕೂ ಹೆಚ್ಚು ಸ್ಪರ್ಧಾಳುಗಳು ಧಾರವಾಡ ಜಿಲ್ಲೆಯ ಹಲವೆಡೆಯಿಂದ ಆಗಮಿಸಿದ್ದರು. ಸಾಯಿ ಜಿಮ್ ಮುಖ್ಯಸ್ಥ ಮಂಜುನಾಥ ಗುಡಾರದ ಅವರ ನೇತೃತ್ವದಲ್ಲಿ ನಡೆದ ಪ್ರದರ್ಶನ ಕಾರ್ಯಕ್ರಮದಲ್ಲಿ ಷರೀಫ್ ಮುಲ್ಲಾ, ಶಂಕರ್ ಪಿಳ್ಳೆ, ಜೆ ಡಿ ಭಟ್ಟ, ಗಂಗಾಧರ್ ಎಮ್ ಖಾನಲಿ, ಸಲೀಮ್ ಘೋರ, ಅನಿಶ್ ದಲಾಲ್, ಅರವಿಂದ್ ಹೆರಪಿರಿ, ಸುನಿಲ್ ಬೇಟಸೂರ್ ಸೇರಿದಂತೆ ಧಾರವಾಡ ಜಿಲ್ಲಾ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
17/12/2021 12:25 pm