ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂಗವಾಗಿ, ಸುದಿಶಾ ಇವೆಂಟ್ಸ್ ವತಿಯಿಂದ ’ಮಿಸ್ ನಾರ್ತ್ ಕರ್ನಾಟಕ’ ಸ್ಪರ್ಧೆಯನ್ನು 18 ರಿಂದ 25 ವಯಸ್ಸಿನ ಯುವತಿಯರಿಗೋಸ್ಕರ ಆನ್ಲೈನ್ ಸ್ಪರ್ಧೆಯಲ್ಲಿ ಯುವತಿಯರು ಭಾಗಿಯಾಗಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಹುಬ್ಬಳ್ಳಿ ಧಾರವಾಡ, ಬಾಗಲಕೋಟ, ಗದಗ, ಹಾವೇರಿ, ಬೆಳಗಾವಿ, ಹೀಗೆ ಉತ್ತರ ಕರ್ನಾಟಕದ ಸುಮಾರು 35 ಕ್ಕು ಹೆಚ್ಚು ಯುವತಿಯರು ಪಾಲ್ಗೊಂಡು, ತಮ್ಮ ಪ್ರತಿಭೆ ತೋರಿಸಿದ್ದಾರೆ. ವಿಜೇತರಾಗಿ ಸ್ವಾತಿ ಅರವಿಂದ ವಾಂಡಕರ,ಸೆಕೆಂಡ್ ರನ್ನರಾಗಿ ರೀತಿಕಾ ಆರ್ ಸೂರ್ಯವಂಶಿ,
ಥರ್ಡ್ ರನ್ನರಾಗಿ ಶ್ವೇತಾ ಎಮ್. ಚೌದರಿ ಆಯ್ಕೆಯಾಗಿದ್ದು. ವಿನ್ನರ್, ರನ್ನರ್‌ಗಳಿಗೆ, ಕಿರೀಟ, ಸರ್ಟಿಫಿಕೇಟ್, ರೋಲೆಟ್‌ಗಳ ನೀಡಿದರು.
Kshetra Samachara
23/09/2021 11:52 am