ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೊರೊನಾ ಭಯ ಬಿಡಿಸಿದ ದೀಪಾವಳಿ! ಸಂಭ್ರಮಕ್ಕೆ ಖರೀದಿ ಜೋರಾಗಿ ನಡೆಯುತ್ತಿದೆ....

ಹುಬ್ಬಳ್ಳಿ: ಇಷ್ಟು ದಿನ ಮನೆಯಲ್ಲಿಯೇ ಇದ್ದ ಜನರಿಗೆ, ದೀಪಾವಳಿ ಹಬ್ಬ ಸಂತಸ ತಂದಿದೆ. ಮಾರ್ಕೆಟ್ ದಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ....‌

ಸುಮಾರು ಆರೇಳು ತಿಂಗಳಿಂದ ಜನರು ಯಾವುದೇ ಹಬ್ಬವನ್ನು ಜೋರಾಗಿ ಮಾಡಿಲ್ಲ. ಕಾರಣ ಕೊರೊನಾ ಸೋಂಕು ಹರಡುವ ಭಯದಿಂದ, ಆದರೆ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ, ಜನರು ಎಲ್ಲ ಭಯ ಬಿಟ್ಟು ಸಂಪ್ರದಾಯಕವಾದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ವಸ್ತುಗಳ ಖರೀದಿಗೆ ಬಜಾರಕ್ಕೆ ಬರುತ್ತಿದ್ದಾರೆ...

ಇನ್ನು ಅದೇ ರೀತಿಯಾಗಿ, ಲಾಕ್ ಡೌನ್ ಸಡಲಿಕೆ ಆದರೂ ಕೂಡಾ, ಜನರು ಅಂಗಡಿಗಳಿಗೆ ಬಂದು ವಸ್ತುಗಳನ್ನು ಖರೀದಿ ಮಾಡಲು ಹಿಂಜರಿಯುತ್ತಿದ್ದರು. ಎಷ್ಟೋ ವಾಣಿಜ್ಯ ಮಳಗಿಗಳು ಸಂಕಷ್ಟಕ್ಕೆ ಇಡಾಗಿದ್ದವು. ಆದ್ದರಿಂದ ದೀಪಾವಳಿ ಸಂಭ್ರಮಕ್ಕೆ ಜನರು ಅಂಗಡಿಗಳಿಗೆ ವಸ್ತುಗಳನ್ನು ಖರೀದಿಸಲು ಮುಂದಾಗಿರುವುದರಿಂದ ಮಾಲೀಕರ ಮುಖದಲ್ಲಿ ಸಂತಸ ಮೂಡಿದೆ...

ಒಟ್ಟಿನಲ್ಲಿ ಕೊರೊನಾ ಭಯ ಬಿಟ್ಟು, ಜನರು ಎಲ್ಲ ರೀತಿಯ ವ್ಯವಹಾರದ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ.....

Edited By : Manjunath H D
Kshetra Samachara

Kshetra Samachara

11/11/2020 12:18 pm

Cinque Terre

39.19 K

Cinque Terre

6