ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಿಸೆಸ್ ಯುನಿಟಿ ಕ್ವೀನ್‌ ಆಫ್‌ ಇಂಡಿಯಾ ಸೀಸನ್-2 ಗ್ರ್ಯಾಂಡ್ ಫಿನಾಲೆಗೆ ಇಂದೇ ಟಿಕೆಟ್ ಬುಕ್‌ ಮಾಡಿ

ಹುಬ್ಬಳ್ಳಿ: ಮಿಸ್ ಅಲ್ಲ ಇದು ಮಿಸೆಸ್ ಸೌಂದರ್ಯ ಸ್ಪರ್ಧೆ. ಇತ್ತೀಚೆಗೆ ವಿವಾಹಿತೆಯರಿಗಾಗಿ ನಡೆಯುತ್ತಿರುವ ಸೌಂದರ್ಯ ಸ್ಪರ್ಧೆಗಳು ಭಾರಿ ಜನಪ್ರಿಯತೆ ಗಳಿಸುತ್ತಿವೆ. ಸದ್ಯ ಧಾರವಾಡದ ಆದಿತ್ಯ ಮಯೂರ ರೆಸಾರ್ಟ್‌ನಲ್ಲಿ ಇಂತಹದ್ದೇ ಕಾರ್ಯಕ್ರಮ ನಡೆಯಲಿದ್ದು, ಮೇ 6ರಿಂದ 8ರವೆಗೆ ಸ್ಪರ್ಧೆ ನಡೆಯಲಿದೆ. ಮೇ 8ರಂದು ಮಧ್ಯಾಹ್ನ 3 ಗಂಟೆಗೆ 'ಗ್ರ್ಯಾಂಡ್ ಫಿನಾಲೆ' ನಡೆಯಲಿದ್ದು, ಸೆಲೆಬ್ರಿಟಿ ಜೊತೆಗೆ ಡಿನ್ನರ್ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ಇಂದೇ ಟಿಕೆಟ್ ಬುಕ್ ಮಾಡಿಕೊಳ್ಳಬೇಕಿದೆ.

ಈ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ನಟಿ ಉಪೇಂದ್ರ ಹಾಗೂ ಅವರ ನಟಿ ಪ್ರಿಯಾಂಕಾ ಉಪೇಂದ್ರ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ತಮ್ಮ ಮುಂದಿನ ಚಿತ್ರ 'ಉಗ್ರಾವತಾರ'ದ ಪ್ರಮೋಷನ್ ಅನ್ನು ಮಾಡಲಿದ್ದಾರೆ. ಪುಣೆಯ ಗೋಲ್ಡ್ ಮ್ಯಾನ್ ಖ್ಯಾತಿಯ ಸನ್ನಿ ವಾಗ್‌ಚೌರೆ, ಸರಿಗಮಪ ಖ್ಯಾತಿಯ ಸುಪ್ರಿಯಾ ಜೋಶಿ, ಗಾಯಕ, ನಟ ಸುಚೇತನ್ ರಂಗಸ್ವಾಮಿ ಅತಿಥಿಗಳಾಗಿದ್ದಾರೆ. ಅಷ್ಟೇ ಅಲ್ಲದೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪಟ್ಟದ ರೂಪದರ್ಶಿಗಳು, ವಿವಿಧ ಸೌಂದರ್ಯ ಸ್ಪರ್ಧೆ ವಿಜೇತರು ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ.

ಟಿಕೆಟ್ ದರವನ್ನು 300 ರೂ., 500 ರೂ. ಹಾಗೂ 1000 ರೂ. ಎಂದು ನಿಗದಿ ಮಾಡಲಾಗಿದೆ. ಟಿಕೆಟ್ ಬೆಲೆಗೆ ತಕ್ಕಂತೆ ನಿಮಗೆ ಸೇವೆಗಳು ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗಾಗಿ 9739560143 ಅಥವಾ 7795138165 ಅಥವಾ 9535454640 ಮೊಬೈಲ್‌ ನಂಬರ್‌ಗೆ ಕರೆ ಮಾಡಬಹುದಾಗಿದೆ.

Edited By : Manjunath H D
Kshetra Samachara

Kshetra Samachara

02/05/2022 05:59 pm

Cinque Terre

13.97 K

Cinque Terre

0