ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಮ್ಮೂರಲ್ಲೇ ಆಯ್ತು ಸಂತೆ ಸಾಕಿಣ್ಣು ಪ್ರಯಾಣದ ಚಿಂತೆ !

ಕುಂದಗೋಳ : ಹಂಚಿನಾಳ ಮತ್ತು ಕುಬಿಹಾಳ ಜನರ ಬಹು ವರ್ಷಗಳ ಬೇಡಿಕೆ ಭಾನುವಾರದ ಹಂಚಿನಾಳ ಸಂತಿ ಕಳೆದ ಮೂರು ವಾರಗಳಿಂದ ಹಂತ ಹಂತವಾಗಿ ಆರಂಭವಾಗಿ ಇಂದು ಭರ್ಜರಿ ವಹಿವಾಟು ಆರಂಭಿಸಿದ್ದು ಎರೆಡು ಗ್ರಾಮಗಳ ಜನ ಪುಲ್ ಖುಷ್ ಆಗಿದ್ದಾರೆ.

ಕುಂದಗೋಳ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಬಸ್ ಸಂಪರ್ಕ ಇಲ್ಲಾ ಅದರಲ್ಲೂ ಹಂಚಿನಾಳ ಕುಬಿಹಾಳ ಸಹ ಒಳಗಾಗಿದ್ದು ಈ ಗ್ರಾಮಗಳು ಹುಬ್ಬಳ್ಳಿಗೆ ಬಸ್ ಸಂಪರ್ಕ ಹಾಗೂ ಕುಂದಗೋಳಕ್ಕೆ ಖಾಸಗಿ ವಾಹನ ಬೈಕ್ ಬಂದು ಸಂತೆ ಮಾಡುವ ಹಲವಾರು ವರ್ಷಗಳ ಪರಿಸ್ಥಿತಿಗೆ ಇಂದು ತಮ್ಮೂರಲ್ಲೇ ಖಾಯಂ ಸಂತೆ ಆಗಿದ್ದು ರೈತರಿಗೆ ಮಹಿಳೆಯರಿಗೆ ಎಲ್ಲಿಲ್ಲದ ಸಂತೋಷ ತಂದಿದೆ.

ಒಟ್ಟಾರೆ ಸಂತೆಯ ಖುಷಿಯನ್ನು ಗ್ರಾಮಸ್ಥರು ಪಬ್ಲಿಕ್ ನೆಕ್ಸ್ಟ್ ಮೂಲಕ ಹಂಚಿಕೊಂಡಿದ್ದು ಸ್ವತಃ ಅವರೇ ವಿಡಿಯೋ ಕಳುಹಿಸಿ ಪ್ರಸಾರ ಮಾಡುವಂತೆ ಕೋರಿದ್ದಾರೆ.

ಇದು ವೀಕ್ಷಕರ ವರದಿ

Edited By : Shivu K
Kshetra Samachara

Kshetra Samachara

03/10/2021 09:20 pm

Cinque Terre

65.01 K

Cinque Terre

5

ಸಂಬಂಧಿತ ಸುದ್ದಿ