ಕುಂದಗೋಳ : ಮೊನ್ನೆ ತಾನೇ ದೇಶ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ ಯೋಧನೊಬ್ಬ ಮತ್ತೆ ಪುನಃ ದೇಶಕ್ಕೆ ಕೊಡುಗೆ ನೀಡುವ ಕಾಯಕಕ್ಕೆ ಅಣಿಯಾಗಿ ಮಕ್ಕಳನ್ನು ಸಹ ದೇಶ ಸೇವೆಗೆ ಹುರಿದುಂಬಿಸುತ್ತಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಯೋಧ ಶಿವಪ್ಪ ಮಲ್ಲಿಕಾರ್ಜುನಪ್ಪ ವಿಠಲಾಪೂರ ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಎ.ಎಸ್.ಸಿ ವಿಭಾಗದಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದಿದ್ದರು.
ಆ ಬಳಿಕ ತಮ್ಮ ಜ್ಞಾನ ಕೌಶಲ್ಯ ಮತ್ತೆ ದೇಶ ಸೇವೆಗೆ ಸಲ್ಲಲಿ ಎಂದು ಯಲಿವಾಳ ಗ್ರಾಮದ ಎಲ್ಲಾ ಮಕ್ಕಳಿಗೂ ಉಚಿತ ಸೇನಾ ತರಬೇತಿ ನೀಡುತ್ತಿದ್ದು ಮಳೆಯನ್ನು ಲೆಕ್ಕಿಸದೆ ಬೆಳಿಗ್ಗೆ 5 ಗಂಟೆಗೆ ಯಲಿವಾಳ ಗ್ರಾಮದ ಹೈಸ್ಕೂಲ್ ಆವರಣದಲ್ಲಿ ಮಕ್ಕಳನ್ನು ವಿವಿಧ ವ್ಯಾಯಾಮ, ಓಟ, ಕಟ್ಟು ಮಸ್ತಾದ ದೇಹದಾರ್ಢ್ಯಕ್ಕೆ ಸಿದ್ಧತೆ ಸೇರಿದಂತೆ ಸೇನೆಯ ಪ್ರತಿಯೊಂದು ಅನುಭವವನ್ನು ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ.
ಮಾಜಿ ಯೋಧ ಶಿವಪ್ಪನ ಕಾರ್ಯಕ್ಕೆ ಯಲಿವಾಳ ಗ್ರಾಮದ ಮಕ್ಕಳು ಪಾಲಕರು ಆಸಕ್ತಿ ತೋರಿ ಅಷ್ಟೇ ಉತ್ಸಾಹದಿಂದ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದು ಯೋಧನ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ.
Kshetra Samachara
26/04/2022 12:47 pm